ADVERTISEMENT

ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತರಬೇತಿಯಲ್ಲಿದ್ದ ‘ಆಸ್ಕರ್’ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 5:44 IST
Last Updated 20 ಜೂನ್ 2023, 5:44 IST
ಮೃತ ಆಸ್ಕರ್ ಶ್ವಾನ
ಮೃತ ಆಸ್ಕರ್ ಶ್ವಾನ   

ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ತಂದಿದ್ದ ‘ಆಸ್ಕರ್’ ಹೆಸರಿನ ಶ್ವಾನ ಅನಾರೋಗ್ಯದಿಂದ ಶನಿವಾರ ಸಂಜೆ ಮೃತಪಟ್ಟಿದೆ.

ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿ, ಕುಳಗಿ ನೇಚರ್‌ ಕ್ಯಾಂಪ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಪಶು ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

‘ಸಾಗವಾನಿ ಬಡ್ಡಿಯಲ್ಲಿರುವ ಹುಳ ಕಡಿತದ ಪರಿಣಾಮ ಒಂದು ತಿಂಗಳಿನಿಂದ ನಾಯಿ ಜ್ವರದಿಂದ ನರಳುತ್ತಿತ್ತು. ಶಿರಸಿ, ಬೆಳಗಾವಿ ಮತ್ತು ಗೋವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ. ತರಬೇತಿ ಪಡೆಯುತ್ತಿದ್ದ ಈ ನಾಯಿ ಮುಂದಿನ ವರ್ಷದಿಂದ ವನ್ಯಜೀವಿ ಹತ್ಯೆ, ಕಳ್ಳಸಾಗಣೆ ತಡೆಕಾರ್ಯಾಚರಣೆ ತಂಡ ಸೇರ್ಪಡೆಯಾಗುವುದಿತ್ತು’ ಎಂದು ವೈಲ್ಡ್ ಲೈಫ್ ಎಸಿಎಫ್ ಎಸ್.ಎಸ್. ನಿಂಗಾಣಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.