ADVERTISEMENT

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ: ಪ್ರಚಾರಕ್ಕೆ ಬ್ಯಾನರ್, ಕರಪತ್ರ ಬಳಕೆ

ಇಂಗ್ಲಿಷ್ ಮಾಧ್ಯಮ ಬೋಧನೆಗೆ ಉತ್ತಮ ಪ್ರತಿಕ್ರಿಯೆ

ಶಾಂತೇಶ ಬೆನಕನಕೊಪ್ಪ
Published 24 ಮೇ 2019, 19:45 IST
Last Updated 24 ಮೇ 2019, 19:45 IST
ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಮಂಜೂರಾಗಿರುವ ಬಗ್ಗೆ ಮುಂಡಗೋಡದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬ್ಯಾನರ್‌ ಅಳವಡಿಸಲಾಗಿದೆ
ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಮಂಜೂರಾಗಿರುವ ಬಗ್ಗೆ ಮುಂಡಗೋಡದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬ್ಯಾನರ್‌ ಅಳವಡಿಸಲಾಗಿದೆ   

ಮುಂಡಗೋಡ:ಸರ್ಕಾರಿ ಶಾಲೆಗಳಲ್ಲಿಯೂ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮಕ್ಕೆ ಚಾಲನೆ ನೀಡಿರುವುದಕ್ಕೆಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ತಾಲ್ಲೂಕಿನ ಒಟ್ಟು ಮೂರು ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅನುಮತಿ ನೀಡಲಾಗಿದೆ.

ಇಲ್ಲಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ 15 ಮಕ್ಕಳುಇಂಗ್ಲಿಷ್ಮಾಧ್ಯಮ ಒಂದನೇ ತರಗತಿಗೆ ಸೇರಲು ಹೆಸರು ನೋಂದಾಯಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ ಯುಕೆಜಿ ಕಲಿತಿರುವ ಕೆಲವು ವಿದ್ಯಾರ್ಥಿಗಳು ಕೂಡ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.ಇಂಗ್ಲಿಷ್ಮಾಧ್ಯಮ ಬೋಧನೆ ಇನ್ನೂ ಅಷ್ಟೊಂದು ಪ್ರಚಾರ ಆಗದಿದ್ದರೂ ಪೋಷಕರು ಆಸಕ್ತಿ ತೋರುತ್ತಿದ್ದಾರೆ.

‘ನೆಮ್ಮದಿಯ ಜೀವನ ನಿಮ್ಮದಾಗಲಿ’: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವ ಬಗ್ಗೆ ತಿಳಿಸಲು ಕರಪತ್ರಗಳನ್ನು ಹಂಚಲಾಗುತ್ತಿದೆ. ಗ್ರಾಮದ ಪ್ರಮುಖ ಓಣಿಗಳು ಹಾಗೂ ಶಾಲಾ ಆವರಣದಲ್ಲಿ ಬ್ಯಾನರ್‌ ಅಳವಡಿಸಲಾಗಿದೆ.

ADVERTISEMENT

‘ನಿಮ್ಮೂರಿನ, ನಿಮ್ಮ ಮನೆಯ ಹತ್ತಿರವಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ಮಾಧ್ಯಮ ಮಂಜೂರಿಯಾಗಿದ್ದು, ಪ್ರವೇಶ ಆರಂಭವಾಗಿದೆ. ಬೇರೆ ಶಾಲೆಗೆ ಮಕ್ಕಳನ್ನು ಸೇರಿಸಿ ಹಣ ಖರ್ಚು ಮಾಡಿ ಪರಿತಪಿಸಬೇಡಿ. ನಿಮ್ಮೂರಿನ ಶಾಲೆಗೆ ಮಕ್ಕಳನ್ನು ಸೇರಿಸಿ ನೆಮ್ಮದಿಯ ಜೀವನ ನಿಮ್ಮದಾಗಲಿ’ ಎಂದು ಕರಪತ್ರದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಸರ್ಕಾರಿ ಶಾಲೆಯಲ್ಲಿರುವ ಸೌಕರ್ಯಗಳು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ವಿವರವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ.

‘ಈಗಾಗಲೇ 15 ಮಕ್ಕಳು ಇಂಗ್ಲಿಷ್ ಮಾಧ್ಯಮ ತರಗತಿಗೆ ಹೆಸರು ನೋಂದಾಯಿಸಿದ್ದಾರೆ. ಖಾಸಗಿ ಶಾಲೆಯಲ್ಲಿ ಯುಕೆಜಿ ಕಲಿತ ಮಕ್ಕಳೂಸರ್ಕಾರಿ ಶಾಲೆಯಲ್ಲಿ ಹೆಸರು ದಾಖಲಿಸಿದ್ದಾರೆ. ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಶಾಸಕರ ಮಾದರಿ ಶಾಲೆಯ ಮುಖ್ಯಶಿಕ್ಷಕ ವಿನೋದ ನಾಯಕ ಹೇಳಿದರು.

‘ಮೇ 25ರಂದುಶಾಲಾಭಿವೃದ್ಧಿ ಸಮಿತಿಸದಸ್ಯರ ಸಭೆ ನಡೆಸಿ, ಇಂಗ್ಲಿಷ್ಮಾಧ್ಯಮ ಕುರಿತು ಚರ್ಚೆ ನಡೆಸಲಾಗುವುದು. ಈಗಾಗಲೇ ಕರಪತ್ರ, ಬ್ಯಾನರ್‌ ಮಾಡಿಸಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಸದ್ಯ 10 ಮಕ್ಕಳ ಪಾಲಕರು ಹೆಸರು ನೋಂದಾಯಿಸುವುದಾಗಿ ತಿಳಿಸಿದ್ದಾರೆ’ ಎಂದು ಚಿಗಳ್ಳಿ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನಾ ರಾಯ್ಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.