ಕಾರವಾರ: ನಗರದಲ್ಲಿ ಭಾನುವಾರ ನಡೆಯವ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಸೊಪ್ಪು, ಇತರ ತರಕಾರಿಗೆ ಎಂಜಲು ಉಗುಳಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಕೆಳಗಿನ ನೆಗಳೂರಿನ ಅಬ್ದುಲ್ ಹಸನ್ ಸಾಬ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಕಳೆ ರಸ್ತೆಯಲ್ಲಿ ತರಕಾರಿ ಮಾರಾಟಕ್ಕೆ ಇಟ್ಟುಕೊಂಡಿದ್ದ ವ್ಯಾಪಾರಿಯು ತರಕಾರಿಗಳಿಗೆ ನೀರು ಚಿಮುಕಿಸುವ ವೇಳೆ ಉಗುಳುತ್ತಿರುವುದನ್ನು ಕಂಡು ಅದನ್ನು ಗ್ರಾಹಕರೊಬ್ಬರು ಚಿತ್ರೀಕರಿಸಿದ್ದರು. ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಸ್ಥಳಕ್ಕೆ ತೆರಳಿ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
‘ವ್ಯಾಪಾರಿಯು ಕೋಮು ದ್ವೇಷ ಹರಡುವ ಸಲುವಾಗಿ ತರಕಾರಿಗಳ ಮೇಲೆ ಉಗುಳಿದ್ದಾಗಿ ಹಿಂದೂ ಪರ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ ಮುರಳಿ ಗೋವೇಕರ ಎಂಬುವವರು ದೂರು ನೀಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ವ್ಯಾಪಾರಿಯನ್ನು ಬಂಧಿಸಲಾಗಿದೆ’ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.