ADVERTISEMENT

ಕಾರವಾರ: ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಸ್ಥಳ ನಿಗದಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 12:01 IST
Last Updated 25 ಸೆಪ್ಟೆಂಬರ್ 2020, 12:01 IST
ಕಾರವಾರದ ನೂತನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಸ್ಥಳ ಪಡೆದುಕೊಳ್ಳಲು ಶುಕ್ರವಾರ ಬಂದಿದ್ದ ಮಹಿಳೆಯರು
ಕಾರವಾರದ ನೂತನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಸ್ಥಳ ಪಡೆದುಕೊಳ್ಳಲು ಶುಕ್ರವಾರ ಬಂದಿದ್ದ ಮಹಿಳೆಯರು   

ಕಾರವಾರ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಶುಕ್ರವಾರ ಸ್ಥಳ ನಿಗದಿ ಮಾಡಲಾಯಿತು. ಸದ್ಯ ಒಟ್ಟು 250 ಮಂದಿಗೆ ಅವಕಾಶ ಲಭಿಸಿದೆ.

ಮಾರುಕಟ್ಟೆಯ ಮೇಲಿನ ಅಂತಸ್ತಿನಲ್ಲಿ ಒಣಮೀನು ಮಾರಾಟ, ಮಧ್ಯಭಾಗದಲ್ಲಿ ತಾಜಾ ಮೀನು ಹಾಗೂ ಕೆಳ ಭಾಗದಲ್ಲಿ ಮೀನು ಕತ್ತರಿಸಲು ಜಾಗ ನಿಗದಿ ಮಾಡಲಾಗಿದೆ. ಹರಿಕಂತ್ರ ಮೀನುಗಾರರ ಸಂಘವು ಗುರುತಿಸಿದ ಮಹಿಳೆಯರಿಗೆ ನಗರಸಭೆಯು ಅವಕಾಶ ನೀಡಿದೆ.

ಇದೇ ಸಂಘವು ಮಾರುಕಟ್ಟೆಯ ಸ್ವಚ್ಛತೆ ಸೇರಿದಂತೆ ಎಲ್ಲ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕಾಗಿ ಪ್ರತಿಯೊಬ್ಬ ಮೀನು ಮಾರಾಟಗಾರರಿಂದ ದಿನಕ್ಕೆ ₹ 25 ಸಂಗ್ರಹಿಸಲಾಗುತ್ತದೆ.

ADVERTISEMENT

ಮೀನು ಮಾರಾಟದ ಸ್ಥಳ ಪಡೆಯಲು ಸಂಘ ಗುರುತಿಸಿದವರ ಹೊರತಾಗಿಯೂ ಒಂದಷ್ಟು ಮಹಿಳೆಯರು ಬಂದಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಕೊನೆಗೆ ನಗರಸಭೆ ಪ್ರಭಾರ ಆಯುಕ್ತರೂ ಆಗಿರುವ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಅವರು ಸ್ಥಳಕ್ಕೆ ಭೇಟಿ ನೀಡಿದರು. ನಗರಸಭೆ ಸಿಬ್ಬಂದಿ ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಸ್ಥಳ ನಿಗದಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.