ADVERTISEMENT

ಶಿರಸಿ | ಸಾಮಾಜಿಕ ಚಿಂತನೆ ಬಂಗಾರಪ್ಪನವರ ಶಕ್ತಿ: ಸಚಿವ ಮಧು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 5:01 IST
Last Updated 26 ಅಕ್ಟೋಬರ್ 2024, 5:01 IST
<div class="paragraphs"><p>ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದ ಪುತ್ರ, ಸಚಿವ ಮಧು ಬಂಗಾರಪ್ಪ</p></div>

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದ ಪುತ್ರ, ಸಚಿವ ಮಧು ಬಂಗಾರಪ್ಪ

   

ಶಿರಸಿ: 'ಸಾಮಾಜಿಕ ಚಿಂತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಹೋರಾಡಿ ಬಿಟ್ಟುಹೋದ ಅರಣ್ಯ ಅತಿಕ್ರಮಣ, ಬಗರ್ ಹುಕುಂ, ಕಸ್ತೂರಿ ರಂಗನ್ ವರದಿ ಜಾರಿಯಂಥ ಸಮಸ್ಯೆಗಳು ಇಂದಿಗೂ ಜೀವಂತವಾಗಿದೆ. ಅವುಗಳನ್ನು ನಿವಾರಿಸುವ ಕಾರ್ಯವಾದರೆ ಅದು ಬಂಗಾರಪ್ಪ ಅವರಿಗೆ ಸಲ್ಲಿಸುವ ಗೌರವವಾಗಿದೆ' ಎಂದು ಬಂಗಾರಪ್ಪ ಪುತ್ರ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿರಸಿಯ ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೆಲ್ ನಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ನಂತರ ಮಾತನಾಡಿದರು. 'ಇನ್ನೂ ಕೂಡ ಬಂಗಾರಪ್ಪ ಅವರ ಶಕ್ತಿ ಏನೆಂದು ಹುಡುಕುತ್ತಿದ್ದೇವೆ. ಅವರ ಅಭಿಮಾನಿಗಳು ಇಂದಿಗೂ ಸಾಕಷ್ಟಿದ್ದು, ಅವರನ್ನು ನಿತ್ಯ ನೆನೆಯುತ್ತಾರೆ. ಬಂಗಾರಪ್ಪನವರ ಶಕ್ತಿ ಅವರ ಬೆಂಬಲಿಗರು, ಅಭಿಮಾನಿಗಳು ಅವರ ಸಾಮಾಜಿಕ ಚಿಂತನೆಗಳಾಗಿವೆ' ಎಂದು ಹೇಳಿದರು.

ADVERTISEMENT

'ಬಂಗಾರಪ್ಪನವರು ಬಿಟ್ಟು ಹೋದ ಸಮಸ್ಯೆಗಳು ಇಂದಿಗೂ ಹಾಗೆಯೇ ಇವೆ. ಅರಣ್ಯ ಅತಿಕ್ರಮಣ, ಕಸ್ತೂರಿ ರಂಗನ್ ವರದಿ, ಬಗರ್ ಹುಕುಂ ಸಮಸ್ಯೆ ಜೀವಂತವಾಗಿದೆ. ಪ್ರಸ್ತುತ ಈ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇದು ಪೂರ್ಣವಾದರೆ ಅದು ಬಂಗಾರಪ್ಪನವರಿಗೆ ಸಲ್ಲುವ ಗೌರವವಾಗಿದೆ' ಎಂದರು.

ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಉದ್ಯಮಿ ಅಶ್ವಿನ್ ಭೀಮಣ್ಣ ಸೇರಿ ಬಂಗಾರಪ್ಪ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.