ADVERTISEMENT

ಗೋವಾಕ್ಕೆ ಅಕ್ರಮವಾಗಿ ಕಪ್ಪೆಗಳ ಸಾಗಣೆ: 41 ಕಪ್ಪೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:24 IST
Last Updated 18 ಜೂನ್ 2024, 14:24 IST
ಕಾರವಾರ ವಲಯ ಅರಣ್ಯಾಧಿಕಾರಿಗಳು ರಕ್ಷಿಸಿರುವ ‘ಇಂಡಿಯನ್ ಬುಲ್ ಫ್ರಾಗ್’ ತಳಿಯ ಕಪ್ಪೆಗಳು
ಕಾರವಾರ ವಲಯ ಅರಣ್ಯಾಧಿಕಾರಿಗಳು ರಕ್ಷಿಸಿರುವ ‘ಇಂಡಿಯನ್ ಬುಲ್ ಫ್ರಾಗ್’ ತಳಿಯ ಕಪ್ಪೆಗಳು   

ಕಾರವಾರ: ನಗರದಿಂದ ಗೋವಾದ ಮಡಗಾಂವಗೆ ಖಾಸಗಿ ಬಸ್‍ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ‘ಇಂಡಿಯನ್ ಬುಲ್ ಫ್ರಾಗ್’ ತಳಿಯ 41 ಕಪ್ಪೆಗಳನ್ನು ಮಂಗಳವಾರ ಕೋಡಿಬಾಗದ ಕಾಳಿ ಸೇತುವೆ ಬಳಿ ಕಾರವಾರ ಅರಣ್ಯ ವಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಕಪ್ಪೆ ಸಾಗಿಸಲಾಗುತ್ತಿದ್ದ ಶಾಂತಾದುರ್ಗಾ ಹೆಸರಿನ ಬಸ್‍ನ್ನು ವಶಕ್ಕೆ ಪಡೆಯಲಾಗಿದೆ. ಬಸ್ ಚಾಲಕ ಗೋವಾದ ಕುಕ್ಕಳ್ಳಿಯ ಸಿದ್ದೇಶ ದೇಸಾಯಿ ಮತ್ತು ಕ್ಲೀನರ್ ಲೊಲೆಮ್‍ನ ಜಾನು ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ‘ಇಂಡಿಯನ್ ಬುಲ್ ಫ್ರಾಗ್‌’ ತಳಿಯ ಕಪ್ಪೆಗಳಿಗೆ ಗೋವಾದಲ್ಲಿ ‘ಜಂಪಿಂಗ್ ಚಿಕನ್’ ಎಂದು ಕರೆಯಲಾಗುತ್ತದೆ. ಅವುಗಳ ಕಾಲುಗಳನ್ನು ಬಳಸಿ, ಸಿದ್ಧಪಡಿಸುವ ಖಾದ್ಯಕ್ಕೆ ಅಲ್ಲಿನ ಕೆಲ ಹೋಟೆಲ್‍ಗಳಲ್ಲಿ ಹೆಚ್ಚು ಬೇಡಿಕೆ ಇದೆ. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಕಪ್ಪೆಗಳನ್ನು ಹಿಡಿದು ಅಕ್ರಮವಾಗಿ ಸಾಗಿಸಲಾಗುತ್ತದೆ’ ಎಂದು ಕಾರವಾರ ಆರ್.ಎಫ್.ಒ ವಿಶ್ವನಾಥ ತಿಳಿಸಿದರು.

ADVERTISEMENT
ಕಾರವಾರ ವಲಯ ಅರಣ್ಯಾಧಿಕಾರಿಗಳು ರಕ್ಷಿಸಿರುವ ‘ಇಂಡಿಯನ್ ಬುಲ್ ಫ್ರಾಗ್’ ತಳಿಯ ಕಪ್ಪೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.