ADVERTISEMENT

ಹೆದ್ದಾರಿ ಪಕ್ಕದ ಹೊಂಡಕ್ಕೆ ಬಿದ್ದ ಅನಿಲ ತುಂಬಿದ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:14 IST
Last Updated 30 ಮಾರ್ಚ್ 2024, 16:14 IST
ಹೊನ್ನಾವರ ಪಟ್ಟಣದ ಗೇರುಸೊಪ್ಪ ವೃತ್ತದ ಸಮೀಪ ಶನಿವಾರ ರಾತ್ರಿ ಹೆದ್ದಾರಿ ಬದಿಯ ಹೊಂಡಕ್ಕೆ ಟ್ಯಾಂಕರ್ ಉರುಳಿಬಿದ್ದಿತು
ಹೊನ್ನಾವರ ಪಟ್ಟಣದ ಗೇರುಸೊಪ್ಪ ವೃತ್ತದ ಸಮೀಪ ಶನಿವಾರ ರಾತ್ರಿ ಹೆದ್ದಾರಿ ಬದಿಯ ಹೊಂಡಕ್ಕೆ ಟ್ಯಾಂಕರ್ ಉರುಳಿಬಿದ್ದಿತು   

ಹೊನ್ನಾವರ: ಪಟ್ಟಣದ ಗೇರುಸೊಪ್ಪ ವೃತ್ತದ ಸಮೀಪ ಇರುವ ಕಾಮತ್ ಎಕ್ಸಿಕ್ಯೂಟಿವ್ ಇನ್ ಪಕ್ಕದ ಹೊಂಡಕ್ಕೆ ಅನಿಲ ತುಂಬಿದ ಟ್ಯಾಂಕರ್ ಒಂದು ಶನಿವಾರ ಉರುಳಿ ಬಿದ್ದು ಜನರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಯಿತು.

ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿರುವುದು ಕಂಡುಬಂದಿಲ್ಲ.ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮುಂಜಾಗ್ರತೆಯಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನದ ಬ್ರೇಕ್ ಹಾಕದೇ ನ್ಯೂಟ್ರಲ್ ಸ್ಥಿತಿಯಲ್ಲಿಟ್ಟು ಚಾಲಕ ಚಹಾ ಕುಡಿಯಲು ಹೋದ ಸಂದರ್ಭದಲ್ಲಿ ಟ್ಯಾಂಕರ್ ಚಲಿಸಿ ಹೊಂಡಕ್ಕೆ ಬಿದ್ದಿತು ಎನ್ನಲಾಗಿದೆ.

ADVERTISEMENT

ಟ್ಯಾಂಕರ್ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದಿದ್ದರಿಂದ ಪಟ್ಟಣದ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.