ADVERTISEMENT

ಭಟ್ಕಳ: ತಂಝೀಮ್‌ ಬಂದ್ ಕರೆಗೆ ಉತ್ತಮ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:33 IST
Last Updated 15 ಅಕ್ಟೋಬರ್ 2024, 14:33 IST
ಭಟ್ಕಳ ಬಂದ್ ಕಾರಣದಿಂದ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಬರ್ಮಾ ಬಜಾರ್‌ ಅಂಗಡಿಗಳನ್ನು ಮುಚ್ಚಲಾಗಿತ್ತು
ಭಟ್ಕಳ ಬಂದ್ ಕಾರಣದಿಂದ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಬರ್ಮಾ ಬಜಾರ್‌ ಅಂಗಡಿಗಳನ್ನು ಮುಚ್ಚಲಾಗಿತ್ತು   

ಭಟ್ಕಳ: ಪ್ರವಾದಿ ಮುಹಮ್ಮದರ ವಿರುದ್ಧ ಅವಹೇಳನಕಾರಿ ನಿಂದನೆ ಮಾಡಿದ ಉತ್ತರಪ್ರದೇಶ ಯತಿ ನರಸಿಂಹಾನಂದ ಅವರ ಬಂಧನ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ತಂಝೀಮ್‌ ವತಿಯಿಂದ ನೀಡಿದ್ದ ಒಂದು ದಿನದ ಬಂದ್ ಕರೆಗೆ ಮಂಗಳವಾರ ತಾಲ್ಲೂಕಿನ ಮುಸ್ಲಿಮರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಸ್ಲಿಂ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.

ಬಂದ್ ಕರೆಗೆ ಭಟ್ಕಳ ಮಾತ್ರವಲ್ಲದೇ ಮುರುಡೇಶ್ವರದಲ್ಲಿಯೂ ಮುಸ್ಲಿಮರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದರು. ಬಂದ್ ಕರೆಯಿಂದಾಗಿ ಪಟ್ಟಣದ ಬರ್ಮಾ ಬಜಾರ್, ಮುಖ್ಯ ರಸ್ತೆ, ನವಾಯತ್ ಕಾಲೊನಿ ಹಾಗೂ ಬಂದರ್ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯದೇ ಸಂಪೂರ್ಣ ಸ್ತಬ್ಧವಾಗಿದ್ದವು. ತಾಲ್ಲೂಕಿನಲ್ಲಿ ಹಿಂದೂ ಒಡೆತನದ ಅಂಗಡಿಗಳು, ರಿಕ್ಷಾ ಹಾಗೂ ಮೀನು ಮಾರುಕಟ್ಟೆಗಳು ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಆದರೂ ಜನಜಂಗುಳಿಯಿಲ್ಲದೇ ಅಲ್ಲಲ್ಲಿ ಬಿಕೋ ಎನ್ನುತ್ತಿದ್ದವು.

ಬಂದ್ ಕರೆಯಿಂದಾಗಿ ತಾಲ್ಲೂಕಿನಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ ಸ್ಥಳದಲ್ಲಿಯೇ ಇದ್ದು ನಿಗಾ ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.