ದಾಂಡೇಲಿ: ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಗರದ ಬೈಲುಪಾರು ನಿವಾಸಿ ವಿಲ್ಸನ್ ಎಂಬಾತನನ್ನು ಬುಧವಾರ ಕದ್ದ ವಸ್ತುವಿನೊಂದಿಗೆ ಬಂಧಿಸಲಾಗಿದೆ.
ನಗರದ ಐಪಿಎಂ, ಹಳೆದಾಂಡೇಲಿ, ಕೋಗಿಲಬನ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಜಿಓಎಸ್‌ನ್ನು ಕಳವು ಮಾಡಲಾಗಿತ್ತು. ಈ ಕೃತ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿಗಳು ತಂಡವನ್ನು ರಚಿಸಿ, ಕಳುವಾಗಿರುವ ವಿದ್ಯುತ್ ಕಂಬದ ಜಿಓಎಸ್‌ಗಳನ್ನು ಹುಡುಕುವ ಕಾರ್ಯಾಚರಣೆ ಕೈಗೊಂಡಿದ್ದರು.
ಹೆಸ್ಕಾಂ ಅಧಿಕಾರಿಗಳು ಪಟೇಲ್ ವೃತ್ತದಲ್ಲಿ ಇರುವ ಗುಜರಿ ಅಂಗಡಿಯನ್ನು ಬುಧವಾರ ಪರಿಶೀಲಿಸಿದಾಗ ಜಿಓಎಸ್ ಹಾಗೂ ಇತರೆ ಕಬ್ಬಿಣದ ಸಾಮಗ್ರಿಗಳು ದೊರತಿವೆ. ಅಂಗಡಿಯವರನ್ನು ವಿಚಾರಿಸಿದಾಗ, ಜಿಓಎಸ್ ಕಳವು ಮಾಡಿದ ಆರೋಪಿಯ ಮನೆಯನ್ನು ತೋರಿಸಿದ್ದಾನೆ. ಮನೆಯನ್ನು ಪರಿಶೀಲಿಸಿದಾಗ ಕಳವು ಮಾಡಿದ ವಸ್ತುಗಳು ದೊರೆತಿವೆ.
ಪಿಎಸ್‌ಐ ಕಿರಣ್ ಪಾಟೀಲ್ ನೇತೃತ್ವದಲ್ಲಿ ನಗರ ಠಾಣೆಯ ಪೊಲೀಸರು ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಮತ್ತು ಗುಜರಿ ಅಂಗಡಿಯವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ನಾಯಕ, ಶಾಖಾಧಿಕಾರಿ ಉದಯ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.