ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ-ಮಳೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 4:31 IST
Last Updated 5 ಆಗಸ್ಟ್ 2020, 4:31 IST
ಶಿರಸಿ-ಬನವಾಸಿ ರಸ್ತೆಯ‌ ಮೇಲೆ ಮರ ಮುರಿದು ಬಿದ್ದಿದೆ
ಶಿರಸಿ-ಬನವಾಸಿ ರಸ್ತೆಯ‌ ಮೇಲೆ ಮರ ಮುರಿದು ಬಿದ್ದಿದೆ   
""

ಶಿರಸಿ: ಮಳೆಯ ಜೊತೆಗೆ ಬೀಸುತ್ತಿರುವ ಭೀಕರ ಗಾಳಿ ಜನರನ್ನು ಕಂಗಾಲು ಮಾಡಿದೆ. ಶಿರಸಿ- ಸಿದ್ದಾಪುರ ತಾಲ್ಲೂಕುಗಳಲ್ಲಿ ಮಂಗಳವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಗಾಳಿಯ ಆರ್ಭಟಕ್ಕೆ ಅನೇಕ ಕಡೆಗಳಲ್ಲಿ ಮರಗಳು ಮುರಿದು ಮನೆ, ವಿದ್ಯುತ್ ಕಂಬಗಳಿಗೆ ಧಕ್ಕೆಯಾಗಿದೆ.

ಶಿರಸಿ- ಬನವಾಸಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಗಣೇಶನಗರದಲ್ಲಿ ಮನೆಯೊಂದರ ಮೇಲೆ‌ ಮರ ಬಿದ್ದು, ಮನೆ ಜಖಂಗೊಂಡಿದೆ. ಜಿಲ್ಲೆಯಲ್ಲಿ ಆ.5ರಿಂದ 8ರವರೆಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದದ್ದು, ರೆಡ್ ಅಲರ್ಟ್ ಘೋಷಿಸಿದೆ.

ಕಾರವಾರದಲ್ಲಿ ಗಾಳಿಯ ಅಬ್ಬರ ಜೋರಾಗಿದೆ. ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಕರಾವಳಿಯಾದ್ಯಂತ ನಿನ್ನೆಯಿಂದಲೂ ವಾತಾವರಣ ಹೀಗೇ ಇದೆ. ಆಗಾಗ ಬಿರುಸಾದ ಮಳೆ ಬೀಳುತ್ತಿದೆ. ದಟ್ಟವಾದ ಮೋಡ ಕವಿದಿದೆ.

ADVERTISEMENT
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಗಾಳಿಯ ಆರ್ಭಟಕ್ಕೆ ಮೆಕ್ಕೆಜೋಳದ ಗಿಡಗಳು ನೆಲಕಚ್ಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.