ADVERTISEMENT

ನಿರ್ಮಾಣ ಹಂತದ ಮನೆ ಗೋಡೆ ತೆರವು: ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 16:20 IST
Last Updated 23 ನವೆಂಬರ್ 2024, 16:20 IST
ಅಂಕೋಲಾ ತಾಲ್ಲೂಕಿನ ತಳಗದ್ದೆಯಲ್ಲಿ ನಿರ್ಮಾಣ ಹಂತದ ಮನೆಯ ಗೋಡೆಯ ಕಲ್ಲುಗಳನ್ನು ಕೆಡವಿರುವುದು
ಅಂಕೋಲಾ ತಾಲ್ಲೂಕಿನ ತಳಗದ್ದೆಯಲ್ಲಿ ನಿರ್ಮಾಣ ಹಂತದ ಮನೆಯ ಗೋಡೆಯ ಕಲ್ಲುಗಳನ್ನು ಕೆಡವಿರುವುದು   

ಅಂಕೋಲಾ: ತಾಲ್ಲೂಕಿನ ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಗದ್ದೆಯ ಮಂಗಲಾ ಗೌಡ ಎಂಬುವವರ ನಿರ್ಮಾಣ ಹಂತದ ಮನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

‘ರಾಜೀವಗಾಂಧಿ ವಸತಿ ನಿಗಮದಿಂದ 2022-23ನೇ ಸಾಲಿನ ಬಸವ ವಸತಿ ಹೆಚ್ಚುವರಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಗೋಡೆಯನ್ನು ಇಬ್ಬರು ಅರಣ್ಯ ರಕ್ಷಕರು ಸೇರಿದಂತೆ ಐವರು ಇದ್ದ ತಂಡ ಕೆಡವಿದೆ. ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪ್ರಕರಣ ಇತ್ಯರ್ಥಗೊಳ್ಳುವ ವರೆಗೆ ಮನೆ ಕಟ್ಟುವುದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಂಡು ತೆರಳಿದ್ದಾರೆ’ ಎಂದು ಮಂಗಲಾ ಗೌಡ ದೂರಿದ್ದಾರೆ.

‘ನಮ್ಮ ಕುಟುಂಬವು ಸುಮಾರು 60 ವರ್ಷಗಳಿಗೂ ಹೆಚ್ಚು ಕಾಲದಿಂದ ತಳಗದ್ದೆಯಲ್ಲಿ ವಾಸವಿದೆ. ಮುಂಚಿನಿಂದ ವಾಸವಿದ್ದ ಜಾಗದಲ್ಲಿಯೇ ಮನೆ ನಿರ್ಮಾಣಕ್ಕೆ ಅನುದಾನ ಪಡೆದುಕೊಂಡು, ಬ್ಯಾಂಕ್‍ನಲ್ಲಿ ಸಾಲ ಮಾಡಿ ಗೋಡೆ ಕಟ್ಟುವ ಕೆಲಸ ನಡೆದಿತ್ತು. ಅದನ್ನು ತೆರವು ಮಾಡಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಮನೆ ತೆರವು ಮಾಡಿರುವ ವಿಚಾರದ ಮಾಹಿತಿ ಇಲ್ಲ. ಸೋಮವಾರ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಅಂಕೋಲಾ ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.