ADVERTISEMENT

ಜೊಯಿಡಾ| ಅಕ್ರಮ ದಾಸ್ತಾನು ಮರಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 13:42 IST
Last Updated 18 ಜೂನ್ 2023, 13:42 IST
ಜೊಯಿಡಾ ತಾಲ್ಲೂಕಿನ ಜಗಲಪೇಟ್ ಭಾಗದಲ್ಲಿ ವಿವಿದೆಡೆ ಅಕ್ರಮವಾಗಿ ದಾಸ್ತಾನು ಮಾಡಿಟ್ಟ ಮರಳನ್ನು ಕಾರವಾರ ಉಪವಿಭಾಗಾಧಿಕಾರಿ ನಿರ್ದೇಶನದ ಮೇರೆಗೆ ಕಂದಾಯ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವುದು,ತಹಸೀಲ್ದಾರ ಬಸವರಾಜ ಟಿ ಹಾಗೂ ಕಂದಾಯ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಇದ್ದರು.

ಜೊಯಿಡಾ: ತಾಲ್ಲೂಕಿನ ಜಗಲಪೇಟ್ ಭಾಗದಲ್ಲಿ ವಿವಿಧೆಡೆ ಅಕ್ರಮವಾಗಿ ದಾಸ್ತಾನು ಮಾಡಿಟ್ಟ 25ಕ್ಕಿಂತ ಹೆಚ್ಚು ಟಿಪ್ಪರ್ ಮರಳನ್ನು ಶನಿವಾರ ತಹಶೀಲ್ದಾರ ಬಸವರಾಜ ಟಿ. ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ರಾಮನಗರ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ವೈಜಗಾಂವದಲ್ಲಿ 2 ಕಡೆಗಳಲ್ಲಿ, ಆಮಸೇತನ ಗೌಳಿವಾಡಾ ಹಾಗೂ ಪಾಯಸವಾಡಿ ತಲಾ ಒಂದು ಕಡೆ ದಾಸ್ತಾನು ಮಾಡಿಟ್ಟ ಮರಳನ್ನು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಮರಳನ್ನು ಜೊಯಿಡಾ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ ಹರಾಜು ಪ್ರಕ್ರಿಯೆ ಕೈಗೊಳ್ಳಲು ತಿಳಿಸಲಾಗಿದೆ. ಹರಾಜು ಪ್ರಕ್ರಿಯೆ ಮುಗಿಯುವವರೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಿ ಬಂದೋಬಸ್ತ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮನಗರ ಪಿಎಸ್ಐ ಬಸವರಾಜ ಮಬನೂರ್, ಉಪ ತಹಶೀಲ್ದಾರ ಸುರೇಶ ಒಕ್ಕಂದ, ಕಂದಾಯ ನಿರೀಕ್ಷಕ ಶ್ಯಾಮಸುಂದರ್, ಕಂದಾಯ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT
.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.