ADVERTISEMENT

ಕುಮಟಾ | ಅಕ್ರಮ ಸಾಗಾಟ: 27 ಎಮ್ಮೆಗಳ ರಕ್ಷಣೆ, ಐವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 4:52 IST
Last Updated 14 ಸೆಪ್ಟೆಂಬರ್ 2024, 4:52 IST
<div class="paragraphs"><p>ಅಕ್ರಮ ಸಾಗಾಟ ಮಾಡುತ್ತಿದ್ದ&nbsp;ಎಮ್ಮೆಗಳ ರಕ್ಷಣೆ</p></div>

ಅಕ್ರಮ ಸಾಗಾಟ ಮಾಡುತ್ತಿದ್ದ ಎಮ್ಮೆಗಳ ರಕ್ಷಣೆ

   

ಕುಮಟಾ: ನೀರು, ಆಹಾರ ನೀಡದೇ ಹಿಂಸಾತ್ಮಕವಾಗಿ ಎಮ್ಮೆ, ಕೋಣಗಳನ್ನು ಮಂಗಳೂರು ಕಡೆ್ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕಂಟೇನರ್ ಲಾರಿಯನ್ನು ಶನಿವಾರ ಪಟ್ಟಣದ ಎಪಿಎಂಸಿ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಅಯ್ಯಬ್ ಅಹಮದ್, ಕಾಸರಗೋಡಿನ ಅಬಬುಕರ್ ಚರಕಾಳ, ಚಾಲಕ ಹಾಸನದ ಅಸ್ಗರ್ ಹುಸೇನ್, ಕ್ಲೀನರ್ ಕಾಸರಗೋಡಿನ ಅಬ್ದುಲ್ ರೆಹಮಾನ್ ಮತ್ತು ದಾವಣಗೆರೆಯ ಚಮನ್ ಸಾಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

₹7.70 ಲಕ್ಷ ಮೌಲ್ಯದ 26 ಎಮ್ಮೆಗಳು ಮತ್ತು ₹30 ಸಾವಿರ ಮೌಲ್ಯದ ಒಂದು ಕೋಣವನ್ನು ವಶಪಡಿಸಿಕೊಳ್ಳಲಾಗಿದೆ. ‘ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ’ ಎಂದು ಪಿಎಸ್ಐ ಮಂಜುನಾಥ ಗೌಡರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.