ADVERTISEMENT

ಶಿರಸಿ: ಏತನೀರಾವರಿ ಯೋಜನೆ ಉದ್ಘಾಟನೆಯಲ್ಲಿ ಬ್ಯಾನರ್ ರಾಜಕೀಯ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 11:51 IST
Last Updated 23 ಜನವರಿ 2021, 11:51 IST
ರಸ್ತೆಯಲ್ಲಿ ಹಾಕಿರುವ ಬ್ಯಾನರ್‌
ರಸ್ತೆಯಲ್ಲಿ ಹಾಕಿರುವ ಬ್ಯಾನರ್‌   

ಶಿರಸಿ: ತಾಲ್ಲೂಕಿನ ಕಲಕರಡಿ ಗ್ರಾಮದ ಏತನೀರಾವರಿ ಯೋಜನೆ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಆಗಮಿಸಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಗ್ರಾಮದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಅಳವಡಿಸಿದ್ದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ರೂಪಿಸಿತ್ತು. ಅದಕ್ಕಾಗಿ ಅವರ ಬ್ಯಾನರ್ ಹಾಕಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದರು.

ಬಿಜೆಪಿಯಲ್ಲಿರುವ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಈ ಬ್ಯಾನರ್ ಇರಿಸುಮುರಿಸು ತರಬಹುದು ಎಂಬ ಯೋಚನೆಯಲ್ಲಿ ಗ್ರಾಮದ ಕಾಂಗ್ರೆಸ್ ಬೆಂಬಲಿಗರಿದ್ದರು.

ADVERTISEMENT

ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಯೋಜನೆ ಉದ್ಘಾಟಿಸಿದ ಬಳಿಕ ಟಾಂಗ್ ನೀಡಿದ ಶಿವರಾಮ ಹೆಬ್ಬಾರ್, ‘ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಫೋಟೊ ಹಾಕುವ ಆಸೆ ಇನ್ನೂ ಹೋಗಿಲ್ಲ. ಅವರಿಗೆ ಈಗ ಸಿಕ್ಕ ಸಮಯವನ್ನು ಬಳಸಿಕೊಂಡಿದ್ದಾರೆ. ನಾನು ಈಗ ಬಿಜೆಪಿಯಲ್ಲಿದ್ದೇನೆ. ಯಾವುದೇ ಸರ್ಕಾರವಿರಲಿ ಕೆಲಸ ಮಾಡುವುದು ನನ್ನ ಗುರಿ’ ಎಂದರು.

‘ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಶಾಸಕರು, ಸಚಿವರು ಆಗಿ ಹೋದರು. ಆದರೆ, ಅವರಿಗೆ ಜನರಿಗೆ ಬೇಕಾದ ಕೆಲಸ ಮಾಡಲು ಆಗಿಲ್ಲ. ಅದನ್ನು ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.