ADVERTISEMENT

ಜೊಯಿಡಾ | ಜಿಂಕೆ ಮಾಂಸ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:05 IST
Last Updated 17 ಅಕ್ಟೋಬರ್ 2024, 14:05 IST
ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜೀವಿ ವಲಯದಲ್ಲಿ ಜಿಂಕೆ ಮಾಂಸದ ತುಂಡು ಕಾಯಿಸುತ್ತಿದ್ದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದರು
ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜೀವಿ ವಲಯದಲ್ಲಿ ಜಿಂಕೆ ಮಾಂಸದ ತುಂಡು ಕಾಯಿಸುತ್ತಿದ್ದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದರು   

ಜೊಯಿಡಾ: ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜೀವಿ ವಲಯದ ಯರಮುಖದ ಮನೆಯ ಶೆಡ್ಡಿನಲ್ಲಿ ಗುರುವಾರ ಜಿಂಕೆ ಮಾಂಸದ ತುಂಡುಗಳನ್ನು ಕಾಯಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ನಂದಿಗದ್ದಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹದೇವ ದಬ್ಗಾರ, ಅನಂತ ಎಲ್ಲೆಕರ ಬಂಧಿತ ಆರೋಪಿಗಳು. ನಾರಾಯಣ ಎಸ್. ದಬಗಾರ ಮತ್ತು ದೀಪಕ ವಸಂತ ನಾಯ್ಕ ಪರಾರಿಯಾಗಿದ್ದಾರೆ. ಇವರಿಂದ 4.4 ಕೆ.ಜಿ. ಜಿಂಕೆ ಮಾಂಸ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಸಿಂಧೆ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ.ಎಸ್. ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಗುಂದ ಆರ್.ಎಫ್‌.ಒ ನೀಲಕಂಠ ದೇಸಾಯಿ, ಡಿ.ಆರ್.ಎಫ್‌.ಒ ಶರತ ಐಹೊಳ್ಳಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.