ADVERTISEMENT

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪರ್ಸಿನ್ ಬೋಟ್ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 9:28 IST
Last Updated 17 ಜನವರಿ 2024, 9:28 IST
<div class="paragraphs"><p>ಪರ್ಸಿನ್ ಬೋಟ್ </p></div>

ಪರ್ಸಿನ್ ಬೋಟ್

   

ಕಾರವಾರ: ಗೋವಾದ ಬೇತುಲ್ ಭಾಗದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮಂಗಳೂರಿನ ಪರ್ಸಿನ್ ಬೋಟ್ ಅನ್ನು ಬುಧವಾರ ಆರು ಮೀನುಗಾರಿಕೆ ಬೋಟ್‌ಗಳ ಸಹಾಯದಿಂದ ರಕ್ಷಿಸಿ ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿಗೆ ಕರೆತರಲಾಯಿತು.

ಮಂಗಳೂರಿನ ಇಂದಾದ್ ಎಂಬುವವರಿಗೆ ಸೇರಿದ್ದ ರಾಯಲ್ ಬ್ಲ್ಯೂ ಹೆಸರಿನ ಪರ್ಸಿನ್ ಬೋಟ್ ಕಾರವಾರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಸಿಲುಕಿತ್ತು. ಅದನ್ನು ಏಶಿಯನ್ ಬ್ಲ್ಯೂ, ಸೀ ಫ್ಲವರ್, ಸೀ ಪ್ರಿನ್ಸ್, ವೈಟ್ ಆರ್ಬಿಟ್, ಬ್ಲ್ಯಾಕ್ ಬೆರ್ರಿ, ಸೀ ಹಂಟರ್ ಹೆಸರಿನ ಬೋಟುಗಳ ನೆರವಿನೊಂದಿಗೆ ರಕ್ಷಿಸಿ ಬಂದರಿಗೆ ಕರೆತರಲಾಯಿತು.

ADVERTISEMENT

'ರಾಯಲ್ ಬ್ಲ್ಯೂ ಬೋಟ್‌ನ ತಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ನೀರು ಒಳನುಗ್ಗಿತ್ತು. ಏಳು ಮಂದಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದ ಬಗ್ಗೆ ಸಂದೇಶ ಕಳಿಸಿದ್ದರು. ಬೋಟ್ ಪತ್ತೆ ಹಚ್ಚಿ ಹಗ್ಗ ಕಟ್ಟಿ ಎಳೆದುಕೊಂಡು ತರಲಾಯಿತು' ಎಂದು ಬ್ಲ್ಯಾಕ್ ಬೆರ್ರಿ ಬೋಟ್ ಚಾಲಕ ಜಯರಾಮ್ ತಿಳಿಸಿದರು.

ಬೋಟನಲ್ಲಿ ತುಂಬುತ್ತಿದ್ದ ನೀರನ್ನು ಪಂಪ್ ಮೂಲಕ ಸಮುದ್ರಕ್ಕೆ ಹೊರಚೆಲ್ಲಲಾಗುತ್ತಿತ್ತು.

'ಬೋಟ್ ಸುರಕ್ಷಿತವಾಗಿ ದಡಕ್ಕೆ ಬಂದಿದೆ. ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ' ಎಂದು ಕರಾವಳಿ ಕಾವಲು ಪಡೆ ಅಧಿಕಾರಿ ನಿಶ್ಚಲಕುಮಾರ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.