ADVERTISEMENT

ರಾ.ಹೆ-69ರಲ್ಲಿ ಗುಡ್ಡ ಕುಸಿತ: ಹೊನ್ನಾವರ-ಗೇರುಸೊಪ್ಪ-ಸಾಗರ ನಡುವೆ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:46 IST
Last Updated 4 ಜುಲೈ 2024, 5:46 IST
<div class="paragraphs"><p>ಭಟ್ಕಳ ರಂಗಿನಕಟ್ಟ ಶಂಸುದ್ದೀನ್ ಸರ್ಕಲ ಜಲಾವೃತ್ತವಾಗಿದೆ ಹೆದ್ದಾರಿ</p></div>

ಭಟ್ಕಳ ರಂಗಿನಕಟ್ಟ ಶಂಸುದ್ದೀನ್ ಸರ್ಕಲ ಜಲಾವೃತ್ತವಾಗಿದೆ ಹೆದ್ದಾರಿ

   

ಕಾರವಾರ: ಹೊನ್ನಾವರ ತಾಲ್ಲೂಕಿನಲ್ಲಿ ನಿರಂತರ ಮಳೆ ಆಗುತ್ತಿರುವ ಪರಿಣಾಮ ಭಾಸ್ಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ-69 ರಲ್ಲಿ ಗುಡ್ಡ ಕುಸಿದಿದೆ. ಇದರಿಂದ ಹೊನ್ನಾವರ-ಗೇರುಸೊಪ್ಪ-ಸಾಗರ ನಡುವೆ ಸಂಚಾರ ಸ್ಥಗಿತಗೊಂಡಿದೆ.

ಬುಧವಾರ ಸಂಜೆಯಿಂದಲೂ ಈ ಭಾಗದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಭೂಕುಸಿತ ಸಂಭವಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು.

ADVERTISEMENT

ಹೆದ್ದಾರಿ ಮೇಲೆ ಬಿದ್ದಿರುವ ಮರಗಳು, ಮಣ್ಣಿನ ರಾಶಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸಂಚಾರ ಸ್ಥಗಿತಗೊಂಡಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

ನಿರಂತರ ಮಳೆಯಿಂದಾಗಿ ಭಟ್ಕಳ ಪಟ್ಟಣದಲ್ಲಿಯೂ ಹಲವೆಡೆ ಜಲಾವೃತ ಸಮಸ್ಯೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.