ADVERTISEMENT

ಕುಮಟಾ | ಕಾರ್ಯಾಚರಣೆ ವೇಳೆಯಲ್ಲಿ ಮತ್ತೆ ಕುಸಿದ ಗುಡ್ಡ: ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 13:25 IST
Last Updated 18 ಜುಲೈ 2024, 13:25 IST
   

ಕಾರವಾರ: ಕುಮಟಾ ತಾಲ್ಲೂಕಿನ ಬರ್ಗಿ ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಕುಸಿದ ಗುಡ್ಡದ ಮಣ್ಣನ್ನು ತೆರವುಗೊಳಿಸುವ ವೇಳೆ ಪುನಃ ಗುಡ್ಡ ಕುಸಿದಿದೆ.

ಗುರುವಾರ ಬೆಳಿಗ್ಗೆ ಗುಡ್ಡ ಕುಸಿದಿದ್ದರಿಂದ ಕುಮಟಾ-ಗೋಕರ್ಣ ಮಾರ್ಗದ ಒಂದು ಭಾಗದಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸಿ, ಇನ್ನೊಂದು ಮಾರ್ಗದ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯ ನಡೆದಿತ್ತು.

ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸುವಾಗಲೆ ಗುಡ್ಡದಿಂದ ವ್ಯಾಪಕ ಪ್ರಮಾಣದ ಮಣ್ಣು ಕುಸಿದು, ಎರಡೂ ಪಥವನ್ನೂ ಆವರಿಸಿಕೊಂಡಿತು. ಇದರಿಂದ ಸಂಚಾರ ಸ್ಥಗಿತಗೊಳಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.