ADVERTISEMENT

‘ಬಾರ್ ಪರವಾನಗಿ ನವೀಕರಿಸಬೇಡಿ’

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 15:56 IST
Last Updated 10 ಜೂನ್ 2019, 15:56 IST
ಶಿರಸಿಯ ಖಾಜಿಗಲ್ಲಿಯಲ್ಲಿ ಬಾರ್‌ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯರು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಶಿರಸಿಯ ಖಾಜಿಗಲ್ಲಿಯಲ್ಲಿ ಬಾರ್‌ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯರು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಕಾರವಾರ: ‘ಸ್ಥಳೀಯರ ಆಕ್ಷೇಪದ ನಡುವೆಯೂಶಿರಸಿ ನಗರದ ಖಾಜಿಗಲ್ಲಿಯಲ್ಲಿ ನಿರ್ಮಾಣಗೊಂಡಿರುವ ‘ಪಾರಿಜಾತಾ ಬಾರ್ ಆ್ಯಂಡ್ ರೆಸ್ಟೋರೆಂಟ‌್’ಗೆ ಈ ವರ್ಷದ ಪರವಾನಗಿಯನ್ನು ನವೀಕರಣ ಮಾಡಬಾರದು’ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಬಾರ್ ಇರುವ ಸ್ಥಳದ ಸುತ್ತಮುತ್ತ ಅಂಗನವಾಡಿ, ದರ್ಗಾ ಹಾಗೂ ಮಸೀದಿಗಳೂ ಇವೆ. ಆದರೆ, ಈ ಬಗ್ಗೆ ಸುಳ್ಳು ಮಾಹಿತಿಯನ್ನು ಕೊಟ್ಟು ಬಾರ್ ನಿರ್ಮಾಣಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಸಹಕಾರ ನೀಡಿದ್ದರು. ಇದು ಸ್ಥಳೀಯರ ಶಾಂತಿಯುತ ಬದುಕಿಗೆ ಅಡ್ಡಿ ಉಂಟು ಮಾಡುತ್ತಿದೆ’ ಎಂದು ಆರೋಪಿಸಿದರು.

‘ಪರಿಶೀಲಿಸಲುಸೂಚಿಸುವೆ’: ‘ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚಿಸಲಾಗುವುದು. ಪರಿಶೀಲನೆಯ ವೇಳೆ ಬೇರಾವುದೇ ಅಕ್ರಮಗಳು ಕಂಡು ಬಂದರೂ ಕ್ರಮ ಜರುಗಿಸಲಾಗುವುದು’ ಎಂದು ಈ ವೇಳೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿದರು.

ADVERTISEMENT

ಸ್ಥಳೀಯರಾದ ಅಭಿಷೇಕ ಹುಲೇಕಲ್, ವಿನೋದ ಹುಲೇಕಲ್, ಅಮ್ಜದ್, ರೇಷ್ಮಾ, ಜೈನಾಬಿ, ಎಸ್.ಎಂ.ಗೌಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.