ಯಲ್ಲಾಪುರ: 'ಕಾರ್ಯಕರ್ತರ ಒತ್ತಾಯದ ನಡುವೆಯೂ ಕೆಲ ಕಾಲದಿಂದ ಸಾರ್ವಜನಿಕ ಕಾರ್ಯಕ್ರಮದಿಂದ ದೂರ ಇದ್ದೆ. ಪ್ರವಾಸ ಬೇಡ ಅಂತ ತೀರ್ಮಾನಿಸಿದ್ದೆ. ಕಾರ್ಯಕರ್ತರ ಆಗ್ರಹದ ಮೇರೆಗೆ ಮತ್ತೆ ಸಾರ್ವಜನಿಕವಾಗಿ ಭಾಗವಹಿಸಲು ಆರಂಭಿಸಿದ್ದೇನೆ' ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
'ಜನರ ಸಂಪರ್ಕದಿಂದ ದೂರ ಇದ್ದಿದ್ದು ನನ್ನದೇ ತಪ್ಪು. ಈ ಹಿಂದೆ ನನ್ನನ್ನು ಯಾವ ರೀತಿ ಆಶೀರ್ವದಿಸಿದ್ದೀರೋ ಅದೇ ರೀತಿ ಈ ಬಾರಿಯೂ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ' ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಹೀಗೆ ಮಾತನಾಡಿದರು.
'ಈಗಾಗಲೇ ಮಹಾಸಂಗ್ರಾಮದ ಸಿದ್ಧತೆ ಆರಂಭವಾಗಿದೆ. ಹಲವಾರು ಸುತ್ತಿನ ಸಭೆ, ಸಂಘಟನಾತ್ಮಕ ಕೆಲಸ ನಡೆದಿದೆ. ಇದರ ಜತೆಗೆ ಕಾರ್ಯಕರ್ತರ ವೇಗವೂ ಇನ್ನಷ್ಟು ಹೆಚ್ಚಬೇಕಿದೆ. ಈ ಬಾರಿಯ ಗೆಲುವು ಐತಿಹಾಸಿಕ ಆಗಬೇಕಿದೆ. ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಗದಂತ ಗೆಲುವು ಜಾಗತಿಕ ಇತಿಹಾಸದಲ್ಲಿ ದಾಖಲಾಗಬೇಕಿದೆ' ಎಂದರು.
'ವಿರೋಧ ಪಕ್ಷಗಳಲ್ಲಿ ಒಮ್ಮತ ಇಲ್ಲ. ಅವು ಚೂರು ಚೂರಾಗಿವೆ' ಎಂದರು.
'ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲಬೇಕು' ಎಂದರು.
ಬಿಜೆಪಿ ಯಲ್ಲಾಪುರ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಪ್ರಮುಖರಾದ ಕೆ.ಜಿ.ನಾಯ್ಕ, ಪ್ರಸಾದ ಹೆಗಡೆ, ಗಣಪತಿ ಮುದ್ದೇಪಾಲ, ವೆಂಕಟ್ರಮಣ ಬೆಳ್ಳಿ, ರವಿ ಶಾನಭಾಗ, ನಮಿತಾ ಬೀಡಿಕರ, ಶ್ರುತಿ ಹೆಗಡೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.