ADVERTISEMENT

ಲಾಟರಿ ಸ್ಕೀಂ ಹಣ ವಂತಿಗೆ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:11 IST
Last Updated 18 ಅಕ್ಟೋಬರ್ 2024, 16:11 IST

ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಬಸ್ತಿಯಲ್ಲಿರುವ ಖಾಸಗಿ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಲಾಟರಿ ಡ್ರಾ ಆಮಿಷ ತೋರಿಸಿ ಸಾರ್ವಜನಿಕರಿಂದ ಹಣ ವಂತಿಗೆ ನಡೆಸುತ್ತಿರುವ ಆರೋಪದಡಿ ಗುರುವಾರ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಮುರುಡೇಶ್ವರದ ಲೊಕೇಶ ನಾಯ್ಕ ಹಾಗೂ ಕಾರ್ಕಳದ ಸಿಯಾನ್‌ ಶರೀಪ್‌ ಆರೋಪಿಗಳಾಗಿದ್ದಾರೆ. ಇಬ್ಬರು ಅಕ್ರಮವಾಗಿ ಹಣ ಚಲಾವಣೆಯ ಸ್ಕೀಮ್ ರೂಪಿಸಿಕೊಂಡು ಜನರಿಂದ ತಿಂಗಳಿಗೆ ಹಣವನ್ನು ಕಟ್ಟಿಸಿಕೊಂಡು, ದುಬಾರಿ ಬೆಲೆಯ ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ನೀಡುವ ಅಮೀಷ ಒಡುತ್ತಿದ್ದರು. ಈ ಕುರಿತು ಭಿತ್ತಿಪತ್ರ ಹಾಗೂ ಬಹುಮಾನ ಚೀಟಿಯನ್ನು ಸಾರ್ವಜನಿಕರಿಗೆ ವಿತರಿಸಿ ಹಣ ವಂತಿಗೆ ಮಾಡುತ್ತಿದ್ದರು ಎಂಬ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT