ADVERTISEMENT

ಕಾರವಾರ: ಕಡಿಮೆ ಇಂಧನ ಬಳಕೆ ಸಾಮರ್ಥ್ಯ ಓಟರ್ ಬೋರ್ಡ್ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2024, 16:09 IST
Last Updated 21 ಮೇ 2024, 16:09 IST
ಯಾಂತ್ರೀಕೃತ ಮೀನುಗಾರಿಕೆಯಲ್ಲಿ ಬಳಸಲಾಗುವ, ಕಡಿಮೆ ಪ್ರಮಾಣದ ಡೀಸೆಲ್ ಬಳಕೆಗೆ ಅನುಕೂಲವಾಗಿಸುವ ಸಿ.ಐ.ಎಫ್.ಟಿ–ವಿ.ಎಸ್ ಓಟರ್ ಬೋರ್ಡ್‍ನ್ನು ಕಾರವಾರದ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.
ಯಾಂತ್ರೀಕೃತ ಮೀನುಗಾರಿಕೆಯಲ್ಲಿ ಬಳಸಲಾಗುವ, ಕಡಿಮೆ ಪ್ರಮಾಣದ ಡೀಸೆಲ್ ಬಳಕೆಗೆ ಅನುಕೂಲವಾಗಿಸುವ ಸಿ.ಐ.ಎಫ್.ಟಿ–ವಿ.ಎಸ್ ಓಟರ್ ಬೋರ್ಡ್‍ನ್ನು ಕಾರವಾರದ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.   

ಕಾರವಾರ: ಯಾಂತ್ರೀಕೃತ ಮೀನುಗಾರಿಕೆಯಲ್ಲಿ ಬಳಸಲಾಗುವ, ಕಡಿಮೆ ಪ್ರಮಾಣದ ಡೀಸೆಲ್ ಬಳಕೆಗೆ ಅನುಕೂಲವಾಗಿಸುವ ಸಿ.ಐ.ಎಫ್.ಟಿ–ವಿ.ಎಸ್ ಓಟರ್ ಬೋರ್ಡ್‍ನ್ನು ಇಲ್ಲಿನ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಟ್ರಾಲರ್ ದೋಣಿಗಳಲ್ಲಿ ಬಲೆಯನ್ನು ವ್ಯವಸ್ಥಿತವಾಗಿ ಬೀಸಲು ಅನುಕೂಲವಾಗುವಂತೆ ರೂಪಿಸಿದ ಬೋರ್ಡ್‍ನ್ನು ಪ್ರಾತ್ಯಕ್ಷಿಕೆ ಮೂಲಕ ಮೀನುಗಾರರಿಗೆ ಪರಿಚಯಿಸಲಾಯಿತು.

‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಬೋರ್ಡ‍ನ್ನು ತುಕ್ಕು ಹಿಡಿಯದಂತೆ ಗ್ರೇಡ್ ಬಿ ಸ್ಟೀಲ್‍ನಿಂದ ತಯಾರಿಸಲಾಗಿದೆ. ಸಾಮಾನ್ಯ ಬೋರ್ಡ್‍ಗಳಿಗೆ ಹೋಲಿಸಿದರೆ ಪ್ರತಿ ಗಂಟೆಯ ಟ್ರಾಲಿಮಘ್‍ನಲ್ಲಿ ಇದು ಸರಾಸರಿ 1 ರಿಂದ 2 ಲೀ ಡೀಸೆಲ್ ಬಳಕೆ ಕಡಿಮೆ ಮಾಡಲಿದೆ’ ಎಂದು ಕೊಚ್ಚಿಯ ಐ.ಸಿ.ಎ.ಆರ್ ಕೇಂದ್ರದ ಮೀನುಗಾರಿಕಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಂ.ಪಿ.ರೆಮೆಸನ್ ವಿವರಿಸಿದರು.

ADVERTISEMENT

ಕಾರ್ಯಕ್ರಮವನ್ನು ದೆಹಲಿಯ ಸಮುದ್ರ ಮೀನುಗಾರಿಕಾ ವಿಭಾಗದ ನಿವೃತ್ತ ಸಹಾಯಕ ಮಹಾನಿರ್ದೇಶಕ ಪಿ.ಪ್ರವೀಣ್ ಉದ್ಘಾಟಿಸಿದ್ದರು. ಸಿ.ಎಮ್.ಎಫ್.ಆರ್.ಐನ ಪ್ರಭಾರ ವಿಜ್ಞಾನಿ ಸುರೇಶ ಬಾಬು ಪಿ.ಪಿ, ಪ್ರಧಾನ ವಿಜ್ಞಾನಿ ಕಾಳಿದಾಸ ಸಿ., ವಿಜ್ಞಾನಿಗಳಾದ ಮಹೇಶ ವಿ., ರಘು ರಾಮುಡು ಕೆ., ತಾಂತ್ರಿಕ ಸಿಬ್ಬಂದಿ ಸೋನಾಲಿ ಎಸ್.ಎಂ, ಪ್ರವೀಣ್ ದುಬೆ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.