ಶಿರಸಿ: ‘ನಾಡು ಶಾಂತಿಯುತವಾಗಿ ಮುಂದೆ ಬರಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು’ ಎಂದು ಶಾಲಾ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಮುಸ್ಲಿಂ ಎಜ್ಯುಕೇಷನ್ ಸೊಸೈಟಿಯ ಯೂನಿಯನ್ ಪ್ರೌಢಶಾಲೆ ಸುವರ್ಣ ಮಹೋತ್ಸವವನ್ನು ಸೋಮವಾರ ಉದ್ಘಾಟಿಸಿ, ‘ತಪ್ಪು ದಾರಿಯಲ್ಲಿ ಸಾಗುತ್ತಿರುವ ಸಮಾಜವನ್ನು ತಿದ್ದುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ’ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಕಲಿಕೆಯಿಂದ ವ್ಯಕ್ತಿಯ ಭವಿಷ್ಯ ಭದ್ರವಾಗುತ್ತದೆ. ಅಂಥ ಭದ್ರ ಜೀವನ ಪ್ರತಿಯೊಬ್ಬರ ಆಸ್ತಿಯಾಗಬೇಕು’ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಬಿವುಲ್ಲಾ ಖಾನ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕೆಪಿಸಿಸಿ ಉಪಾಧ್ಯಕ್ಷ ವೈ.ಸಯಿದ್ ಅಹ್ಮದ್, ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಎಂಇಎಸ್ ಶಿಕ್ಷಣ ಸಂಸ್ಥೆ ಸಹ ಕಾರ್ಯದರ್ಶಿ ದೀಪಕ್ ದೊಡ್ಡೂರು, ನಗರಸಭೆ ಸದಸ್ಯೆ ಪ್ರಿಯಾ ನಾಯ್ಕ, ಡಿಡಿಪಿಐ ಪಿ.ಬಸವರಾಜ್, ಬಿಇಒ ನಾಗರಾಜ ನಾಯ್ಕ,
ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.