ADVERTISEMENT

ಕಾಂಗ್ರೆಸ್‌ಗೆ 18 ಶಾಸಕರ ಸೇರ್ಪಡೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:08 IST
Last Updated 26 ಅಕ್ಟೋಬರ್ 2024, 15:08 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿರಸಿ: ‘ಕಾಂಗ್ರೆಸ್‌ಗೆ 8 ಅಲ್ಲ, 18 ಶಾಸಕರು ಬರುತ್ತಾರೆ. ಅವರಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕೂಡ ಒಬ್ಬರು’ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

‘ಶಿವರಾಮ ಹೆಬ್ಬಾರ್ ಅವರು ಬರಲು ವಿಳಂಬ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್‌‍ನಿಂದಲೇ ಬಿಜೆಪಿಗೆ ಹೋದವರು. ಅವರಂತೆ ಈ ಹಿಂದೆ ಕಾಂಗ್ರೆಸ್ ತೊರೆದು ಹೋದ ಎಲ್ಲರೂ ಮರಳುತ್ತಾರೆ’ ಎಂದು ಅವರು ಶನಿವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT