ADVERTISEMENT

ಕೋಸ್ಟ್‌ಗಾರ್ಡ್‌ ಕಮಾಂಡರ್ ಆಗಿ ಕಾರವಾರದ ಮನೋಜ ಬಾಡ್ಕರ್ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:35 IST
Last Updated 12 ಸೆಪ್ಟೆಂಬರ್ 2022, 13:35 IST
ಭಾರತೀಯ ಕೋಸ್ಟ್‌ಗಾರ್ಡ್‌ನ ಪಶ್ಚಿಮ ವಲಯದ ಕಮಾಂಡರ್ ಆಗಿ ಮನೋಜ ಬಾಡ್ಕರ್ (ಬಲಬದಿಯಲ್ಲಿ ಇರುವವರು) ಮುಂಬೈನಲ್ಲಿ ಸೋಮವಾರ ಪದಗ್ರಹಣ ಮಾಡಿದರು. ನಿಕಟಪೂರ್ವ ಕಮಾಂಡರ್ ರಾಜನ್ ಬರ್ಗೋತ್ರ ಅಧಿಕಾರದ ದಂಡವನ್ನು ಹಸ್ತಾಂತರಿಸಿದರು.
ಭಾರತೀಯ ಕೋಸ್ಟ್‌ಗಾರ್ಡ್‌ನ ಪಶ್ಚಿಮ ವಲಯದ ಕಮಾಂಡರ್ ಆಗಿ ಮನೋಜ ಬಾಡ್ಕರ್ (ಬಲಬದಿಯಲ್ಲಿ ಇರುವವರು) ಮುಂಬೈನಲ್ಲಿ ಸೋಮವಾರ ಪದಗ್ರಹಣ ಮಾಡಿದರು. ನಿಕಟಪೂರ್ವ ಕಮಾಂಡರ್ ರಾಜನ್ ಬರ್ಗೋತ್ರ ಅಧಿಕಾರದ ದಂಡವನ್ನು ಹಸ್ತಾಂತರಿಸಿದರು.   

ಕಾರವಾರ: ಭಾರತೀಯ ಕೋಸ್ಟ್‌ಗಾರ್ಡ್‌ನ ಪಶ್ಚಿಮ ವಲಯದ ಕಮಾಂಡರ್ ಆಗಿ ಕಾರವಾರದ ಮನೋಜ ವಸಂತ ಬಾಡ್ಕರ್ ಅಧಿಕಾರ ಸ್ವೀಕರಿಸಿದರು. ಮುಂಬೈನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಅವರು ‍ಪದಗ್ರಹಣ ಮಾಡಿದರು.

ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಲಕ್ಷದ್ವೀಪ ಪ್ರದೇಶಗಳು ಪಶ್ಚಿಮ ವಲಯದಲ್ಲಿವೆ. ಮನೋಜ ಅವರು ಇನ್ನುಮುಂದೆ ಕೋಸ್ಟ್‌ ಗಾರ್ಡ್‌ನ ಈ ವಲಯದ ಎಲ್ಲ ಚಟುವಟಿಕೆಗಳ ಮುಖ್ಯಸ್ಥರಾಗಿರುತ್ತಾರೆ.

ಅವರು ಇನ್‌‍ಸ್ಪೆಕ್ಟರ್ ಜನರಲ್ ಆಗಿ 2018ರಲ್ಲಿ ಬಡ್ತಿ ಹೊಂದಿದ್ದರು. ದೆಹಲಿಯಲ್ಲಿರುವ ಕೋಸ್ಟ್‌ಗಾರ್ಡ್‌ನ ಆಯ್ಕೆ ಮಂಡಳಿ (ಸಿ.ಜಿ.ಎಸ್.ಬಿ) ಅಧ್ಯಕ್ಷರಾಗಿಯೂ ಅವರು ಕೆಲಸ ನಿರ್ವಹಿಸಿದ್ದರು. 2006ರಿಂದ 2008ರವರೆಗೆ ಕರ್ನಾಟಕ ಮತ್ತು 2013ರಿಂದ 2018ರ ಅವಧಿಯಲ್ಲಿ ಗೋವಾ ವಿಭಾಗದ ಮುಖ್ಯಸ್ಥರಾಗಿದ್ದರು.

ADVERTISEMENT

ಕಾರವಾರ ಸೇಂಟ್ ಜೋಸೆಫ್ ಪ್ರೌಢಶಾಲೆ, ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು, 36 ವರ್ಷಗಳಿಂದ ಕೋಸ್ಟ್‌ಗಾರ್ಡ್‌ನ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.