ADVERTISEMENT

ಸಿದ್ದಾಪುರ: ಪುನೀತ್ ರಾಜ್‌ಕುಮಾರ್‌ ಅನಾಥಾಶ್ರಮದಲ್ಲಿ ‘ಮಂತ್ರ ಮಾಂಗಲ್ಯ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:44 IST
Last Updated 18 ಜುಲೈ 2024, 14:44 IST
ಸಿದ್ದಾಪುರದ ಮೂಗದೂರಿನ ಪುನೀತ್ ರಾಜ್‌ಕುಮಾರ್‌ ಆಶ್ರಯಧಾಮ ಅನಾಥಾಶ್ರಮದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ದಿವ್ಯಾ ಹಾಗೂ ಈರಣ್ಣ ಅವರಿಗೆ ಮಂತ್ರ ಮಾಂಗಲ್ಯದ ಮದುವೆ ಮಾಡಲಾಯಿತು
ಸಿದ್ದಾಪುರದ ಮೂಗದೂರಿನ ಪುನೀತ್ ರಾಜ್‌ಕುಮಾರ್‌ ಆಶ್ರಯಧಾಮ ಅನಾಥಾಶ್ರಮದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ದಿವ್ಯಾ ಹಾಗೂ ಈರಣ್ಣ ಅವರಿಗೆ ಮಂತ್ರ ಮಾಂಗಲ್ಯದ ಮದುವೆ ಮಾಡಲಾಯಿತು   

ಸಿದ್ದಾಪುರ: ತಾಲ್ಲೂಕಿನ ಮೂಗದೂರಿನ ಪುನೀತ್ ರಾಜ್‌ಕುಮಾರ್‌ ಆಶ್ರಯಧಾಮ ಅನಾಥಾಶ್ರಮದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ  ದಿವ್ಯಾ ಹಾಗೂ ಈರಣ್ಣ ಅವರಿಗೆ ಗುರುವಾರ ಮಂತ್ರ ಮಾಂಗಲ್ಯದ ಮದುವೆ ಮಾಡಲಾಯಿತು.

ಕೆಲ ವರ್ಷಗಳ ಹಿಂದೆ ಮನೆಯವರಿಂದ ತಿರಸ್ಕರಿಸಲ್ಪಟ್ಟು ಮಾನಸಿಕವಾಗಿ ಅಸ್ವಸ್ಥರಾಗಿದ್ದ ಹೊನ್ನಾವರದ ದಿವ್ಯಾ ಆಶ್ರಮದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹಲವು ವರ್ಷಗಳಿಂದ ಆಶ್ರಮದಲ್ಲೆ ಇದ್ದ ಶಿಗ್ಗಾಂವನ ಈರಣ್ಣ, ದಿವ್ಯಾ ಪರಸ್ಪರ  ಪ್ರೀತಿಸುತ್ತಿದ್ದರು‌. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಎರಡು ಮನೆಯವರಿಗೆ ವಿಷಯ ತಿಳಿಸಿ ತಾಲ್ಲೂಕಿನ ಗಣ್ಯರು ಹಾಗೂ ಮುತ್ತೈದೆಯವರ ಸಮ್ಮುಖದಲ್ಲಿ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮಾಡಿದರು. ನವಜೋಡಿಗೆ ಹೊಸಬಟ್ಟೆ, ಹೂವಿನ ಹಾರ, ಉಂಗುರ ಹಾಗೂ ತಾಳಿಯೊಂದಿಗೆ ಸರಳವಾಗಿ ವಿವಾಹ ಮಾಡಲಾಯಿತು. ಪತ್ರಕರ್ತ ಕನ್ನೇಶ್ ನಾಯ್ಕ ಮಂತ್ರ ಮಾಂಗಲ್ಯ ನಡೆಸಿಕೊಟ್ಟರು.

ಆಶ್ರಮದ ಮುಖ್ಯಸ್ಥೆ ಮಮತಾ ನಾಯ್ಕ, ಕಾಂಗ್ರೆಸ್ ತಾಲ್ಲೂಕು ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ,  ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ.ನಾಯ್ಕ, ರೈತ ಮುಖಂಡ ವೀರಭದ್ರ ನಾಯ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಸಿರ್ ಖಾನ್, ರಾಘವೇಂದ್ರ ಕಾವಂಚೂರ, ಕೆ.ಟಿ.ಹೊನ್ನೆಗುಂಡಿ, ಎಂ.ಡಿ.ನಾಯ್ಕ, ಟಿ.ಕೆ.ಎಂ.ಆಜಾದ್, ಅಸ್ಲಾಂ ಸಿದ್ದಾಪುರ, ಚಿತ್ರಕಲಾ ಶಿಕ್ಷಕ ರಾಘವೇಂದ್ರ ನಾಯ್ಕ ಹಾಗೂ ಮಹಿಳೆಯರು ಮದುವೆಯಲ್ಲಿ ಭಾಗವಹಿಸಿ ವಧು-ವರನನ್ನು ಹರಸಿದರು.

ADVERTISEMENT

ಇದೇ ವೇಳೆ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ವಾರ್ಷಿಕೋತ್ಸವ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.