ಶಿರಸಿ: ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಸಮಾಜ ಸೇವೆ ಮಾಡಲು ಈ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ ಎಂದುಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಇಲ್ಲಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ನಾನು ರಾಜಕಾರಣ ಮಾಡಲು ಬಂದಿರುವುದು. ನನ್ನ ಈ ಹೇಳಿಕೆಯನ್ನು ಮಾಧ್ಯಮದವರುಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಹೇಳಿದರು.
ಜನೌಷಧ ಕೇಂದ್ರ ಉದ್ಘಾಟನೆ:
ಶಿರಸಿಯಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿರುವ ಜನೌಷಧ ಕೇಂದ್ರವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದರು.
ಜಿಲ್ಲೆಯಾದ್ಯಂತ ಆರಂಭಿಸಿರುವ ಪ್ರಧಾನ ಮಂತ್ರಿ ಡಯಾಲಿಸಿಸ್ ಯೋಜನೆಯಿಂದಾಗಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳು ಮರು ಜೀವ ಪಡೆಯುವಂತಾಗಿದೆ ಎಂದರು.
ಜಿಲ್ಲೆಯಾದ್ಯಂತ ಆರಂಭಿಸಿರುವ ಪ್ರಧಾನ ಮಂತ್ರಿ ಡಯಾಲಿಸಿಸ್ ಯೋಜನೆಯಿಂದಾಗಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳು ಮರು ಜೀವ ಪಡೆಯುವಂತಾಗಿದೆ ಎಂದರು.
ನಿಯಮದಂತೆ ವೈದ್ಯರು ರೋಗಿಗಳಿಗೆ ಔಷಧ ಬರೆದು ಕೊಡುವಾಗ ಕಂಪನಿಯ ಹೆಸರು ಬರೆದುಕೊಡುವಂತಿಲ್ಲ. ಆದರೆ, ವೈದ್ಯರು ಮತ್ತು ಕಂಪನಿಯ ನಡುವಿನ ಹೊಂದಾಣಿಕೆಯಿಂದ ವೈದ್ಯರು ಔಷಧದ ಹೆಸರಿನ ಜೊತೆಗೆ ಕಂಪನಿ ಹೆಸರು ಉಲ್ಲೇಖಿಸುತ್ತಾರೆ. ಕೆಲವರು ಔಷಧ ಖರೀದಿಸಿದ ಮೇಲೆ ತಂದು ತೋರಿಸುವಂತೆ ರೋಗಿಗಳಿಗೆ ತಿಳಿಸುತ್ತಾರೆ ಎಂದು ಆರೋಪಿಸಿದರು.
ದೇಶಕ್ಕೆ ಹೊಂದಾಣಿಕೆಯಾಗುವ ಔಷಧ ಕಂಡುಹಿಡಿಯುವ ಪ್ರಯತ್ನ ನಡೆಯಲೇ ಇಲ್ಲ.ಇದರ ಹಿಂದೆ ದೊಡ್ಡ ಲಾಬಿ ಕೆಲಸ ಮಾಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.