ADVERTISEMENT

ಭಟ್ಕಳ: ಜನರ‌ ಸಮಸ್ಯೆ ಆಲಿಸಿದ ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 13:55 IST
Last Updated 25 ಫೆಬ್ರುವರಿ 2024, 13:55 IST
ಭಟ್ಕಳದ ತಮ್ಮ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಜನರ ಸಮಸ್ಯೆ ಆಲಿಸಿದರು
ಭಟ್ಕಳದ ತಮ್ಮ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಜನರ ಸಮಸ್ಯೆ ಆಲಿಸಿದರು   

ಭಟ್ಕಳ: ಪಟ್ಟಣದ ತಮ್ಮ ಕಚೇರಿಯಲ್ಲಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭಾನುವಾರ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಆಲಿಸಿದರು.

ಸಭೆಗೆ ಆಗಮಿಸಿದ ಬಹುತೇಕ ಮಹಿಳೆಯರು ಜೆ.ಜೆ.ಎಂ‌ ಕಾಮಗಾರಿ ಪೂರ್ಣಗೊಳ್ಳದ ಕಾಮಗಾರಿ ಕಾರಣ ಕುಡಿಯುವ ನೀರು ಸಿಗುತ್ತಿಲ್ಲ‌. ಇದರಿಂದಾಗಿ ಕುಡಿಯುವ ನೀರಿಗಾಗಿ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಸಚಿವರ ಗಮನಕ್ಕೆ ತಂದರು.‌

ಸಮಸ್ಯೆ ಆಲಿಸಿದ ಸಚಿವರು ಶೀಘ್ರವೇ ಭಟ್ಕಳಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಲೇಜು ಶಿಕ್ಷಣ ಮುಂದುವರೆಸಲು ಹಣ ಇಲ್ಲ‌ಎಂದು ಸಚಿವರ ಮುಂದೆ ನಿವೇದಿಸಿಕೊಂಡ ಕೂಡಲೆ ಸ್ಪಂದಿಸಿದ ಸಚಿವರು ಅಗತ್ಯ ಇರುವ ಎಲ್ಲಾ ಶುಲ್ಕ ಭರಿಸುವುದಾಗಿ ತಿಳಿಸಿದರು.

ADVERTISEMENT

ಗಂಭೀರ‌ ಖಾಯಿಲೆಯಿಂದ ಬಳಲುತ್ತಿದ್ದ ಚಿಕಿತ್ಸೆಗಾಗಿ ಸಹಾಯಧನ‌ ಕೋರಿ ಬಂದ‌ವರಿಗೆ ವೈಯಕ್ತಿಕವಾಗಿ ಸಹಾಯಧನ ಮಾಡಿದ ಸಚಿವರು ಸರ್ಕಾರದಿಂದಲೂ ಸಹಾಯಧನ‌ ಬಿಡುಗಡೆ ಮಾಡಿಸಿಕೊಡುವ ಭರವಸೆ ನೀಡಿದರು.

ಮುಂಡಳ್ಳಿ ಹಾಗೂ ಹೆಂಜಿಲ‌ ಭಾಗಕ್ಕೆ ಬಸ್ ಬೀಡುವಂತೆ ನಾಗರಿಕರು ಆಗ್ರಹಿಸಿದರು. ವಸತಿ, ರಸ್ತೆ, ಗೃಹಲಕ್ಷ್ಮಿ ಯೋಜನೆ‌ ಸೇರಿದಂತೆ ಹಲವು ಸಮಸ್ಯೆಗಳ‌ ಬಗ್ಗೆ ಜನರು ಸಚಿವರ ಗಮನಕ್ಕೆ ತಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ನಾಯ್ಕ,‌ ಮುಖಂಡರಾದ ಗೋಪಾಲ ನಾಯ್ಕ, ರಾಜು‌ ನಾಯ್ಕ, ಮಂಜಪ್ಪ‌ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.