ADVERTISEMENT

ಮುಖ್ಯವಾಹಿನಿಗೆ ಬಾರದ ಅಲ್ಪಸಂಖ್ಯಾತರು: ಕಾಗೇರಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:02 IST
Last Updated 13 ಜೂನ್ 2024, 16:02 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಕಾರವಾರ: ‘ಕಾಂಗ್ರೆಸ್‍ನ ತುಷ್ಟೀಕರಣದ ಫಲವಾಗಿ ಇಂದಿಗೂ ಅಲ್ಪಸಂಖ್ಯಾತರು ರಾಷ್ಟ್ರೀಯ ಮುಖ್ಯವಾಹಿನಿಗೆ ಬಂದಿಲ್ಲ.  ಅವರು ಪಕ್ಷಪಾತೀಯವಾಗಿ ಮತ ಚಲಾಯಿಸುವುದನ್ನು ಮುಂದುವರಿಸಿದ್ದಾರೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬಂದು, ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಚರ್ಚಿಸಬೇಕು ಎಂಬುದನ್ನು  ಪ್ರತಿಪಾದಿಸುತ್ತಲೇ ಇದ್ದೇನೆ. ಅತಿಯಾದ ತುಷ್ಟೀಕರಣ, ಮತಬ್ಯಾಂಕ್ ರಾಜಕೀಯಕ್ಕೆ ಒಳಗಾಗಿ ಅವರು ಮುನ್ನೆಲೆಗೆ ಬರದಂತಾಗಿದ್ದರು. ಈ ಸಲವಾದರೂ ಅವರು ಮುನ್ನೆಲೆಗೆ ಬರುವ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‍ನಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಿಲ್ಲ. ಅವರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುತ್ತದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT