ಶಿರಸಿ: ಹಾಲು ಉತ್ಪಾದಕರು ಸಂಘದ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲ್ಲೂಕಿನ ಮಂಜುಗುಣಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಈಚೆಗೆ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಹಾಗೂ ಸತ್ಯ ಗಣಪತಿ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಂಘದ ಲಾಭಾಂಶ ಹಣದ ಶೇ 65ರಷ್ಟನ್ನು ಹಾಲು ಉತ್ಪಾದಕರಿಗೆ ನೀಡುವುದು ಒಳ್ಳೆಯ ವಿಷಯ. ಹಾಲು ಉತ್ಪಾದನೆಯ ಜೊತೆಗೆ ಈ ಭಾಗದ ಜನರಿಗೆ ಸ್ವ ಉದ್ಯೋಗ, ಸ್ವಾವಲಂಬಿ ಜೀವನದ ಜೊತೆಗೆ ಆರ್ಥಿಕ ಸದೃಢತೆಯನ್ನೂ ಈ ಸಂಘ ಒದಗಿಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ನನ್ನ ಸಹಕಾರ ಇದ್ದು, ಶಾಸಕನಾಗಿ ಪ್ರಯತ್ನಿಸುತ್ತೇನೆ’ ಎಂದರು.
ಸಮಿತಿಯ ಅಧ್ಯಕ್ಷ ಪ್ರವೀಣ ಪಾಟೀಲ್ ರಾಗಿಹೊಸಹಳ್ಳಿ, ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಮಂಜುಗುಣಿ ದೇವಾಲಯದ ಅರ್ಚಕ ಶ್ರೀನಿವಾಸ್ ಭಟ್ ಇತರರು ಇದ್ದರು. ನಂತರ ಸಂಘದ ಲಾಭಾಂಶದ ಚೆಕ್ ಅನ್ನು ಹಾಲು ಉತ್ಪಾದಕರಿಗೆ ವಿತರಿಸಲಾಯಿತು.
ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಕಲ್ಲಳ್ಳಿ, ಸಹಕಾರಿ ಸಂಘಗಳ ನಿಬಂಧಕ ಟಿ.ವಿ. ಶ್ರೀನಿವಾಸ್, ಒಕ್ಕೂಟದ ಜಿಲ್ಲಾ ಪ್ರಮುಖ ಎಸ್.ಎಸ್. ಬಿಜೂರ, ಪಿಡಿಒ ಸೌಮ್ಯ ಹೆಗಡೆ, ಕರುಣಾಕರ ಹೆಗಡೆ ಕಲ್ಲಳ್ಳಿ, ನಾರಾಯಣ ಮರಾಠಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.