ADVERTISEMENT

ಮುಂಡಗೋಡ | ಇಂದಿರಾಗಾಂಧಿ ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳಿಗೆ ‘ಮಂಗನ ಬಾವು’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:53 IST
Last Updated 21 ನವೆಂಬರ್ 2024, 13:53 IST
ಮುಂಡಗೋಡನ ಇಂದಿರಾಗಾಂಧಿ ವಸತಿ ಶಾಲೆಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭರತ ಡಿ.ಟಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಭೇಟಿ ನೀಡಿದರು
ಮುಂಡಗೋಡನ ಇಂದಿರಾಗಾಂಧಿ ವಸತಿ ಶಾಲೆಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭರತ ಡಿ.ಟಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಭೇಟಿ ನೀಡಿದರು   

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಇಲ್ಲಿನ ಶಿರಸಿ ರಸ್ತೆಯ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾಗಾಂಧಿ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನ ಬಾವು ಕಾಯಿಲೆ ಕಾಣಿಸಿಕೊಂಡಿದೆ.

ವಸತಿ ಶಾಲೆಯಲ್ಲಿ 205 ವಿದ್ಯಾರ್ಥಿಗಳಿದ್ದು, ಅದರಲ್ಲಿ ಬುಧವಾರ 25 ಮಂದಿಗೆ ಮಂಗನಬಾವು ಕಾಣಿಸಿದ್ದರಿಂದ ಮನೆಗೆ ಕಳಿಸಲಾಗಿತ್ತು. ಗುರುವಾರ ಮತ್ತೆ 25 ವಿದ್ಯಾರ್ಥಿಗಳಲ್ಲಿ ಕಾಯಿಲೆಯ ಲಕ್ಷಣ ಕಂಡುಬಂದಿದೆ.

‘ಮಂಗನ ಬಾವು ಬಂದಿರುವ ವಿದ್ಯಾರ್ಥಿಗಳು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂತು. ಮೂರು–ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡ ಮಂಗನ ಬಾವು ದಿನದಿಂದ ದಿನಕ್ಕೆ ತೀವ್ರವಾಗಿ ಹರಡುತ್ತಿದೆ’ ಎಂದು ಶಿಕ್ಷಕರು ಹೇಳಿದರು.

ADVERTISEMENT

‘ಮಂಗನಬಾವು ಲಕ್ಷಣವುಳ್ಳ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ವಿಶ್ರಾಂತಿಗಾಗಿ ಮನೆಗೆ ಕರೆದೊಯ್ಯಲು ಪಾಲಕರಿಗೆ ತಿಳಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಹೇಳಿದರು.

‘ಮಂಗನ ಬಾವು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ, ನೆಗಡಿ, ಗಂಟಲು ನೋವು ಇದರ ಲಕ್ಷಣಗಳಾಗಿದ್ದು, ಔಷಧಿ ನೀಡಲಾಗುವುದು. ಕೆಲವು ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭರತ ಡಿ.ಟಿ.ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.