ADVERTISEMENT

ದಾಂಡೇಲಿ– ಧಾರವಾಡ ರೈಲು ಪುನರಾರಂಭಕ್ಕೆ ಸಂಸದ ಕಾಗೇರಿ ಪತ್ರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:12 IST
Last Updated 2 ಜುಲೈ 2024, 14:12 IST
<div class="paragraphs"><p> ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (ಸಂಗ್ರಹ ಚಿತ್ರ)</p></div>

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (ಸಂಗ್ರಹ ಚಿತ್ರ)

   

ದಾಂಡೇಲಿ: ದಾಂಡೇಲಿಯಿಂದ ಧಾರವಾಡಕ್ಕೆ ರೈಲು ಸೇವೆ ಪುನರಾರಂಭಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮಂಗಳವಾರ ಪತ್ರ ಬರೆದು ವಿನಂತಿಸಿದ್ದಾರೆ.

ದಾಂಡೇಲಿಯು ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿದೆ. ನನ್ನ ಸಂಸದೀಯ ಕ್ಷೇತ್ರ ದಾಂಡೇಲಿ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳು ದಾಂಡೇಲಿ ಮತ್ತು ಸುತ್ತಮುತ್ತಲಿನ ಸಾವಿರಾರು ಜನರಿಗೆ ಬಹಳ ಅವಶ್ಯಕವಾಗಿವೆ. ಬ್ರಿಟಿಷರ ಕಾಲದಲ್ಲಿ ರೈಲು ಸೇವೆಗಳನ್ನು ಪ್ರಾರಂಭಿಸಲಾಯಿತು. ಆದರೆ, ನಂತರ ಅದನ್ನು ನಿಲ್ಲಿಸಲಾಯಿತು ಎಂದು ಹೇಳಿದ್ದಾರೆ.

ADVERTISEMENT

ಅಂದಿನ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿಯವರೊಂದಿಗೆ ನಿಮ್ಮ ಪ್ರಯತ್ನದಿಂದ ನವೆಂಬರ್ 4 ರಂದು ದಾಂಡೇಲಿ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು. ಮತ್ತೆ 2019 ರಲ್ಲಿ ಕೋವಿಡ್ ಕಾರಣದಿಂದ ರೈಲು ಸೇವೆಗಳನ್ನು ಮತ್ತೊಮ್ಮೆ ನಿಲ್ಲಿಸಲಾಯಿತು. ರೈಲು ಸಂಚಾರ ಸ್ಥಗಿತದಿಂದ ದಾಂಡೇಲಿಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈಗ ದಾಂಡೇಲಿಯಿಂದ ಧಾರವಾಡಕ್ಕೆ ರೈಲನ್ನು ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮತ್ತು ನಿರ್ದೇಶನ ನೀಡಿ ಆದಷ್ಟು ಬೇಗ ಜನರು ಪ್ರಯೋಜನ ಪಡೆಯುವಂತೆ ಕ್ರಮವಹಿಸಿ ಎಂದು ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.