ADVERTISEMENT

ಕುಂಬಾರಕೇರಿ: ಗಮನಸೆಳೆಯುವ ಮಣ್ಣಿನ ಆಕಾಶ ಗೂಡು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:11 IST
Last Updated 24 ಅಕ್ಟೋಬರ್ 2024, 16:11 IST
ಅಂಕೋಲಾ ತಾಲ್ಲೂಕಿನ ಕುಂಬಾರಕೇರಿಯ ಕುಂಭ ಕುಟೀರದಲ್ಲಿ ತಯಾರಾಗಿರುವ ಮಣ್ಣಿನ ಆಕಾಶ ಗೂಡು, ಹಣತೆ, ಲಾಟೀನುಗಳು
ಅಂಕೋಲಾ ತಾಲ್ಲೂಕಿನ ಕುಂಬಾರಕೇರಿಯ ಕುಂಭ ಕುಟೀರದಲ್ಲಿ ತಯಾರಾಗಿರುವ ಮಣ್ಣಿನ ಆಕಾಶ ಗೂಡು, ಹಣತೆ, ಲಾಟೀನುಗಳು   

ಅಂಕೋಲಾ: ಬೆಳಕಿನ ಹಬ್ಬ ದೀಪಾವಳಿಗೆ ಮಾರುಕಟ್ಟೆಯಲ್ಲಿ ವಿಧವಿಧದ ಆಕಾಶ ಬುಟ್ಟಿ, ಹಣತೆ ಮಾರಾಟಕ್ಕೆ ಬಂದಿರುವುದು ಒಂದೆಡೆಯಾದರೆ, ತಾಲ್ಲೂಕಿನ ಕುಂಬಾರಕೇರಿಯಲ್ಲಿ ಸಿದ್ಧಗೊಂಡಿರುವ ಪಾರಂಪರಿಕ ಮಣ್ಣಿನ ದೀಪ, ಆಕಾಶ ಗೂಡು ಗಮನಸೆಳೆಯುತ್ತಿವೆ.

ದೀಪಾವಳಿ ಹಬ್ಬಕ್ಕಾಗಿ ಸ್ಥಳೀಯರಾದ ವಾಸುದೇವ ಗುನಗಾ ಮಣ್ಣಿನ ಲಾಟೀನು, ಆಕಾಶ ಗೂಡು, ಹಣತೆಗಳನ್ನು ಸಿದ್ಧಪಡಿಸಿದ್ದಾರೆ. ಮಾರಾಟದ ಉದ್ದೇಶಕ್ಕೆ ಸಿದ್ಧಗೊಂಡ ಇವುಗಳನ್ನು ಬಳಸಿಕೊಂಡು ಜನರಿಗೆ ಪಾರಂಪರಿಕ ಮಣ್ಣಿನ ಪರಿಕರಗಳ ಕುರಿತಾಗಿಯೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕುಂಬಾರಕೇರಿಯ ಕಳಸ ದೇವಸ್ಥಾನದ ಹಿಂದಿರುವ ತಮ್ಮ ಕುಂಭ ಕುಟೀರ ಗುಡಿ ಕೈಗಾರಿಕೆಯಲ್ಲಿ ಮಣ್ಣಿನ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆಯ ಜತೆಗೆ ಆಸಕ್ತರಿಗೆ ತರಬೇತಿಯನ್ನೂ ಅವರು ನೀಡುತ್ತಿದ್ದಾರೆ.

ADVERTISEMENT

‘ನಶಿಸಿ ಹೋಗುತ್ತಿರುವ ಹಳೆಯ ಸಂಪ್ರದಾಯ, ಕಸುಬುಗಳನ್ನು ಉಳಿಸುವುದರ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ. ಮಣ್ಣಿನ ಸತ್ವದಲ್ಲಿ ಹೆಚ್ಚು ಆರೋಗ್ಯಕ್ಕೆ ಸಂಬಂಧಪಟ್ಟ ಅಂಶಗಳಿದ್ದು, ಮಣ್ಣಿನಿಂದ ಸಿದ್ಧಪಡಿಸಿದ ಆಕಾಶ ಗೂಡು, ಲಾಟೀನು, ಹಣತೆಗೆ ಉತ್ತಮ ಬೇಡಿಕೆಯೂ ಬರುತ್ತಿದೆ. ಈಗಿನ ತಲೆಮಾರಿನ ಜನರಿಗೆ ಅವುಗಳ ಮಹತ್ವದ ಬಗ್ಗೆ ತಿಳಿಸುವ ಕೆಲಸವೂ ಆಗಬೇಕಾಗಿದೆ’ ಎಂದು ವಾಸುದೇವ ಗುನಗಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.