ADVERTISEMENT

ಮುಂಡಗೋಡ: ಗೋಶಾಲೆಗೆ ಭೇಟಿ ನೀಡಿದ ಕೇಂದ್ರೀಯ ಟಿಬೆಟನ್‌ ಆಡಳಿತ ಮಂಡಳಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 14:28 IST
Last Updated 26 ನವೆಂಬರ್ 2024, 14:28 IST
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ಗೆ ಐದು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರೀಯ ಟಿಬೆಟನ್‌ ಆಡಳಿತ ಮಂಡಳಿಯ ಮುಖ್ಯಸ್ಥ ಪೆಂಪಾ ಸಿರಿಂಗ್‌ ಅವರನ್ನು ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಅಸೋಸಿಯೇಷನ್‌ ಹಾಗೂ ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಸೊಸೈಟಿ ಸದಸ್ಯರು ಗೌರವಿಸಿದರು
ಮುಂಡಗೋಡ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ಗೆ ಐದು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರೀಯ ಟಿಬೆಟನ್‌ ಆಡಳಿತ ಮಂಡಳಿಯ ಮುಖ್ಯಸ್ಥ ಪೆಂಪಾ ಸಿರಿಂಗ್‌ ಅವರನ್ನು ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಅಸೋಸಿಯೇಷನ್‌ ಹಾಗೂ ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಸೊಸೈಟಿ ಸದಸ್ಯರು ಗೌರವಿಸಿದರು   

ಮುಂಡಗೋಡ: ಹಿಮಾಚಲ ಪ್ರದೇಶದ ಧರ್ಮಾಶಾಲಾದಲ್ಲಿರುವ ಕೇಂದ್ರೀಯ ಟಿಬೆಟನ್‌ ಆಡಳಿತ ಮಂಡಳಿಯ ಮುಖ್ಯಸ್ಥ ಸಿಕ್ಯಾಂಗ್‌ ಪೆಂಪಾ ಸಿರಿಂಗ್‌ ಅವರು, ಐದು ದಿನಗಳ ಪ್ರವಾಸಕ್ಕಾಗಿ ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ಗೆ ಸೋಮವಾರ ಆಗಮಿಸಿದರು.

ಐದು ದಿನಗಳ ಪ್ರವಾಸದಲ್ಲಿ ಇಲ್ಲಿನ ನಿರಾಶ್ರಿತರ ಕಾಲೊನಿಯಲ್ಲಿ ನೆಲೆಸಿರುವ ಬಿಕ್ಕುಗಳು, ಟಿಬೆಟನ್‌ರ ಕುಂದುಕೊರತೆಗಳನ್ನು ಆಲಿಸಲಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಾಡೆನ್‌ ಲಾಚಿ ಬೌದ್ಧ ಮಂದಿರದಲ್ಲಿ ಮಂಗಳವಾರ ನಡೆದ ಬೌದ್ಧ ಬಿಕ್ಕುಗಳ ಪದಗ್ರಹಣ ಸಮಾರಂಭದಲ್ಲಿ ಪೆಂಪಾ ಸಿರಿಂಗ್‌ ಪಾಲ್ಗೊಂಡರು. ನಂತರ ಕ್ಯಾಂಪ್‌ ನಂ.3ರ ಗೋಶಾಲೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಜಾನುವಾರುಗಳನ್ನು ಸಾಕುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ADVERTISEMENT

ವೃದ್ಧ ಟಿಬೆಟನ್‌ರ ಕಾಲೊನಿಗೂ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಸ್ಥಳೀಯ ಡೊಗುಲಿಂಗ್‌ ಸೆಟ್ಲಮೆಂಟ್‌ ಕಚೇರಿಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಿದರು. ಗೋಮಾಂಗ್‌ ಬೌದ್ಧ ಮಂದಿರದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡರು.

ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಅಸೋಸಿಯೇಷನ್‌ ಹಾಗೂ ಇಂಡೋ ಟಿಬೆಟನ್‌ ಫ್ರೆಂಡಶಿಫ್‌ ಸೊಸೈಟಿ ಸದಸ್ಯರು ಪೆಂಪಾ ಸಿರಿಂಗ್‌ ಅವರನ್ನು ಗೌರವಿಸಿದರು.

ಎಸ್‌.ಫಕ್ಕೀರಪ್ಪ, ಜಂಪಾ ಲೋಬ್ಸಂಗ್‌, ಬಸವರಾಜ ಓಶೀಮಠ, ಮಲ್ಲಿಕಾರ್ಜುನ ಕಿತ್ತೂರ, ಅರುಣ ಗೊಂದಳೆ, ಅಶೋಕ ಗಾಣಿಗೇರ, ಡೊಗುಲಿಂಗ್‌ ಸೆಟ್ಲಮೆಂಟ್‌ ಕಚೇರಿಯ ಚೇರಮನ್‌, ಪ್ರತಿನಿಧಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.