ADVERTISEMENT

ಕೋಟಿ ಅನುದಾನದಲ್ಲೂ ಕಾಣದ ಅಭಿವೃದ್ಧಿ

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಗೋಕರ್ಣದ ಕಡಲತೀರಗಳು

ರವಿ ಸೂರಿ
Published 6 ಮೇ 2019, 9:16 IST
Last Updated 6 ಮೇ 2019, 9:16 IST
ಗೋಕರ್ಣದ ಓಂ ಬೀಚ್‌ನಲ್ಲಿ ಪ್ರವಾಸಿಗರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ಕೆಳೆಗೆ ನಿಂತಿರುವುದು.
ಗೋಕರ್ಣದ ಓಂ ಬೀಚ್‌ನಲ್ಲಿ ಪ್ರವಾಸಿಗರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ಕೆಳೆಗೆ ನಿಂತಿರುವುದು.   

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಕಡಲತೀರಗಳೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಆದರೆ, ಮೂಲಸೌಕರ್ಯಗಳ ಸಮಸ್ಯೆ ಮಾತ್ರ ಹೇಳತೀರದಾಗಿದೆ.

ಮೇನ್ ಬೀಚ್‌ನಲ್ಲಿ ಬಿಟ್ಟರೆ ಉಳಿದ ಯಾವ ಬೀಚಿನಲ್ಲಿಯೂ ಶೌಚಾಲಯಗಳಿಲ್ಲ. ಸಮುದ್ರದಲ್ಲಿಸ್ನಾನ ಮಾಡಿದರೆ ಬಟ್ಟೆ ಬದಲಿಸಲೂಶೆಡ್, ಬಾತ್ ರೂಂಗಳಿಲ್ಲ.ಶೌಚಾಲಯದಲ್ಲಿ ಹಣವನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಾರೆ. ಆದರೆ, ಒಳ್ಳೆಯ ನೀರನ್ನೂ ಕೊಡುವುದಿಲ್ಲ ಎಂದು ಪ್ರವಾಸಿಗ ದಾವಣಗೆರೆಯ ಎಸ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿಬಂದಿದ್ದರು. ಇಲ್ಲಿಯ ಬೀಚ್‌ಗಳ ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಕೆಲವು ಕಡೆ ಬೀಚ್‌ಗಳಲ್ಲಿ ಮಹಿಳೆಯರು ಅರೆಬೆತ್ತಲಾಗಿ ಸ್ನಾನ ಮಾಡುತ್ತಿದ್ದಾರೆ. ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ವ್ಯವಸ್ಥೆ ಬೇಕಾಗಿದೆ. ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದೂ ತಿಳಿಸಿದ್ದರು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ADVERTISEMENT

ಒಂದು ಕಾಲದಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದಪ್ಯಾರಡೈಸ್ ಬೀಚ್, ಪ್ರವಾಸೋದ್ಯಮ ಇಲಾಖೆಯ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ಅಭಿವೃದ್ಧಿ ಕಾಣದೇ ತ್ಯಾಜ್ಯದ ಬೀಡಾಗಿದೆ.ಮುಖ್ಯ ಕಡಲ ತೀರದಲ್ಲಿ₹ 74 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಉದ್ಯಾನ ಜೀರ್ಣಾವಸ್ಥೆ ತಲುಪಿದೆ.

ಸಮುದ್ರ ತೀರಗಳಲ್ಲಿ ತಾತ್ಕಾಲಿಕವಾಗಿ ಶೆಕ್ಸ್, ವಸತಿ ಗೃಹ ನಿರ್ಮಿಸಿದವರಿಂದಸ್ಥಳೀಯ ಗ್ರಾಮ ಪಂಚಾಯ್ತಿ ನಿರ್ದಿಷ್ಟ ಶುಲ್ಕ ವಸೂಲಿ ಮಾಡುತ್ತದೆ.ಸುಮಾರು 200ಕ್ಕೂ ಹೆಚ್ಚು ಅಂಗಡಿಗಳಿವೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬಂದರೂ ಯಾವುದೇ ನಿರ್ದಿಷ್ಟ ಸೌಲಭ್ಯಗಳಿಲ್ಲ. ಸಿ.ಆರ್.ಝೆಡ್ ನಿಯಮದ ಕಾರಣಕೊಡುವ ಅಧಿಕಾರಿಗಳು ನಿರಾಶೆಗೊಳಿಸುತ್ತಿದ್ದಾರೆ ಎಂಬ ದೂರು ಅಂಗಡಿಕಾರರದ್ದು.

ಅನುದಾನದ ವಿವರ

₹ 3.11 ಕೋಟಿ

ಸ್ವದೇಶಿ ದರ್ಶನ’ ಯೋಜನೆಯಡಿ ಓಂ ಬೀಚ್ ಮತ್ತು ಕುಡ್ಲೆ ಬೀಚ್‌ ಸ್ವಚ್ಛತೆ

₹1.91 ಕೋಟಿ

‘ಕೋಸ್ಟಲ್ ವೃತ್ತ’ ಯೋಜನೆಯಡಿ ಮೇನ್ ಬೀಚ್‌ ಸ್ವಚ್ಛತೆ

₹ 2.90 ಕೋಟಿ

ಓಂ ಬೀಚ್‌ ಸ್ವಚ್ಛತೆ

₹ 1.81 ಕೋಟಿ

ಕುಡ್ಲೆ ಬೀಚ್‌ ಸ್ವಚ್ಛತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.