ADVERTISEMENT

‘ಕೈಗಾ’ಕ್ಕೆ ಉನ್ನತಾ ಸುರಕ್ಷಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 14:52 IST
Last Updated 13 ಸೆಪ್ಟೆಂಬರ್ 2021, 14:52 IST
ರಾಷ್ಟ್ರೀಯ ಸುರಕ್ಷಾ ಮಂಡಳಿಯ ಕರ್ನಾಟಕ ವಿಭಾಗವು ಪ್ರದಾನ ಮಾಡಿದ ‘ಉನ್ನತಾ ಸುರಕ್ಷಾ ಪುರಸ್ಕಾರ – 2021’ನ್ನು ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕಗಳ ನಿರ್ದೇಶಕರಾದ ಟಿ.ಪ್ರೇಮಕುಮಾರ, ಪ್ರಮೋದ ಜಿ.ರಾಯಚೂರ ಸ್ವೀಕರಿಸಿದರು.
ರಾಷ್ಟ್ರೀಯ ಸುರಕ್ಷಾ ಮಂಡಳಿಯ ಕರ್ನಾಟಕ ವಿಭಾಗವು ಪ್ರದಾನ ಮಾಡಿದ ‘ಉನ್ನತಾ ಸುರಕ್ಷಾ ಪುರಸ್ಕಾರ – 2021’ನ್ನು ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕಗಳ ನಿರ್ದೇಶಕರಾದ ಟಿ.ಪ್ರೇಮಕುಮಾರ, ಪ್ರಮೋದ ಜಿ.ರಾಯಚೂರ ಸ್ವೀಕರಿಸಿದರು.   

ಕಾರವಾರ: ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕಗಳಿಗೆ ಒಂದರಿಂದ ನಾಲ್ಕು ಘಟಕಗಳಿಗೆ ರಾಷ್ಟ್ರೀಯ ಸುರಕ್ಷಾ ಮಂಡಳಿಯ ಕರ್ನಾಟಕ ವಿಭಾಗವು ‘ಉನ್ನತಾ ಸುರಕ್ಷಾ ಪುರಸ್ಕಾರ – 2021’ ಪ್ರದಾನ ಮಾಡಿದೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ 3 ಮತ್ತು 4 ಘಟಕಗಳ ನಿರ್ದೇಶಕ ಟಿ.ಪ್ರೇಮಕುಮಾರ, 1 ಮತ್ತು 2 ಘಟಕಗಳ ನಿರ್ದೇಶಕ ಪ್ರಮೋದ ಜಿ.ರಾಯಚೂರ ಸ್ವೀಕರಿಸಿದರು. ಸುರಕ್ಷಾ ವಿಭಾಗ ಪ್ರಮುಖರಾದ ಜಯಪ್ರಕಾಶ್ ಹೆಗಡೆ ಮತ್ತು ಮೈಕೆಲ್ ಟೋಮಿ, ಕೈಗಾ ನೌಕರರ ಸಂಘದ ಅಧ್ಯಕ್ಷ ಸುಮಂತ್ ಹೆಬ್ಳೇಕರ್, ನೌಕರರ ಸಂಘದ ಜತೆ ಕಾರ್ಯದರ್ಶಿ ವಿಜಯಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT