ADVERTISEMENT

ಹಕ್ಕು ಚಲಾಯಿಸುವ ಛಲ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 12:13 IST
Last Updated 31 ಆಗಸ್ಟ್ 2018, 12:13 IST
ಕವಿ ರಮೇಶ ಹೆಗಡೆ ಅವರು ಗಾಲಿ ಮಂಚದಲ್ಲಿ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿದರು
ಕವಿ ರಮೇಶ ಹೆಗಡೆ ಅವರು ಗಾಲಿ ಮಂಚದಲ್ಲಿ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿದರು   

ಶಿರಸಿ: ಮನೆಯ ಗೋಡೆಗಳ ನಡುವೆ ಪುಸ್ತಕ ಹಿಡಿದು ಜಗತ್ತನ್ನು ಕಾಣುವ ಕವಿ, ಇಲ್ಲಿನ ವಿನಾಯಕ ಕಾಲೊನಿಯ ರಮೇಶ ಹೆಗಡೆ ಅವರು ನಗರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಚಿಕ್ಕಂದಿನಲ್ಲಿ ಕಾಯಿಲೆಯಿಂದ ತೊಂದರೆಗೊಳಗಾಗಿರುವ ಅವರು, ಕಥೆ, ಕವನಗಳನ್ನು ಬರೆಯುತ್ತ, ಸದಾ ಹಾಸಿಗೆಯಲ್ಲಿದ್ದೇ ಪ್ರಪಂಚದ ಆಗು–ಹೋಗುಗಳನ್ನು ತಿಳಿಯುತ್ತಾರೆ. ಅವರು ಆಂಬುಲೆನ್ಸ್‌ನಲ್ಲಿ ಮತಗಟ್ಟೆಯವರೆಗೆ ಬಂದು, ಗಾಲಿ ಮಂಚದ ಮೇಲೆ ಮತ ಕೇಂದ್ರದ ಒಳಗೆ ತೆರಳಿ, ತಮ್ಮ ಹಕ್ಕನ್ನು ಚಲಾಯಿಸಿದರು.

10ನೇ ವಾರ್ಡಿನ ಮತದಾರರಾಗಿದ್ದ ಅವರು, 2ನೇ ಕ್ರಮಾಂಕದ ಶಾಸಕರ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ADVERTISEMENT

ಅಂಗವಿಕಲರಿಗೆ ಮತದಾನಕ್ಕೆ ನೆರವಾಗುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಕೆಲವು ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆಗೊಳಿಸಿತ್ತು. ಅಂಗವಿಕಲ ಮತದಾರರಿಗೆ ವಿಶೇಷ ಆದ್ಯತೆ ಕಲ್ಪಿಸಿ, ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.