ಕಾರವಾರ: ‘ಸಮುದಾಯದ ಅಭಿವೃದ್ಧಿಗೆ ಹಲವು ಚಟುವಟಿಕೆ ಕೈಗೊಂಡಿರುವ ರೋಟರಿ ಕ್ಲಬ್ ಮಹಿಳಾ ಸಬಲೀಕರಣಕ್ಕೂ ಒತ್ತು ನೀಡುತ್ತಿದೆ’ ಎಂದು ರೋಟರಿ ಪ್ರಾಂತಪಾಲ ಶರದ್ ಪೈ ಹೇಳಿದರು.
ಇಲ್ಲಿನ ರೋಟರಿ ಶತಾಬ್ದಿ ಭವನದಲ್ಲಿ ರೋಟರಿ ಕ್ಲಬ್ ಕಾರವಾರ ಘಟಕದಿಂದ ಮಹಿಳೆಯರಿಗೆ ಹಮ್ಮಿಕೊಂಡಿರುವ ಉಚಿತ ಹೊಲಿಗೆ ಹಾಗೂ ಕಸೂತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅಗತ್ಯ ಚಟುವಟಿಕೆಗಳ ತರಬೇತಿಯನ್ನು ಹಂತ ಹಂತವಾಗಿ ಸಂಸ್ಥೆಯಿಂದ ನೀಡಲಾಗುತ್ತಿದೆ’ ಎಂದರು.
ರೋಟರಿ ಪ್ರಾಂತ ಕಾರ್ಯದರ್ಶಿ ಅಜಯ್ ಮೆನನ್, ಸಹಾಯಕ ಪ್ರಾಂತಪಾಲ ಸ್ಟಿಫನ್ ರೊಡ್ರಗೀಸ್ ಮಾತನಾಡಿದರು. ರೋಟರಿ ಕ್ಲಬ್ ಕಾರವಾರ ಘಟಕದ ಅಧ್ಯಕ್ಷ ಮಾರುತಿ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ನಾಯ್ಕ ವಂದಿಸಿದರು. ಶೈಲೇಶ ಹಳದೀಪುರ ನಿರೂಪಿಸಿದರು.
ರೋಟರಿ ಕ್ಲಬ್ ಸದಸ್ಯರು, ಇನ್ನರ್ ವ್ಹೀಲ್ ಅಧ್ಯಕ್ಷೆ ಸೀಮಾ ಗೋವೆಕರ, ಸೋನಾ ಫರ್ನಾಂಡಿಸ್, ಹೊಲಿಗೆ ತರಬೇತಿ ಶಿಕ್ಷಕಿ ಶುಭಾಂಗಿ ಶಿರೋಡಕರ್, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.