ADVERTISEMENT

ಕಾರವಾರ | ‘ಕಾಂಕ್ರೀಟ್ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:09 IST
Last Updated 13 ಆಗಸ್ಟ್ 2020, 16:09 IST
ಕಾರವಾರದ ಬಾಂಡಿಶಿಟ್ಟಾದಲ್ಲಿ ಕಾಂಕ್ರೀಟ್ ರಸ್ತೆಯ ತುದಿಯಲ್ಲಿ ರಸ್ತೆಯ ಮಧ್ಯೆ ಹಾಕಿರುವ ಮಣ್ಣಿನಲ್ಲಿ ಗುರುವಾರ ಕಾರೊಂದು ಸಿಲುಕಿ ಚಾಲಕ ತೊಂದರೆ ಅನುಭವಿಸಿದರು
ಕಾರವಾರದ ಬಾಂಡಿಶಿಟ್ಟಾದಲ್ಲಿ ಕಾಂಕ್ರೀಟ್ ರಸ್ತೆಯ ತುದಿಯಲ್ಲಿ ರಸ್ತೆಯ ಮಧ್ಯೆ ಹಾಕಿರುವ ಮಣ್ಣಿನಲ್ಲಿ ಗುರುವಾರ ಕಾರೊಂದು ಸಿಲುಕಿ ಚಾಲಕ ತೊಂದರೆ ಅನುಭವಿಸಿದರು   

ಕಾರವಾರ: ನಗರದ ಬಾಂಡಿಶಿಟ್ಟಾದಲ್ಲಿ ರಾಜ್ಯ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಿಧಾನಗತಿಯಲ್ಲಿದೆ. ಇದರಿಂದ ನಿತ್ಯವೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಪ್ರತಿ ಮಳೆಗಾಲವೂ ರಸ್ತೆಯಲ್ಲಿ ದೊಡ್ಡ ಹೊಂಡಗಳಾಗಿ ವಾಹನ ಸವಾರರು ಹರಸಾಹಸ ಪಡುತ್ತಿದ್ದರು. ಪದೇಪದೇ ಡಾಂಬರೀಕರಣ ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಹಾಗಾಗಿ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ರಸ್ತೆಯ ಒಂದು ಭಾಗಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಮತ್ತೊಂದು ಭಾಗದ ಕಾಮಗಾರಿ ಆರಂಭವಾಗಬೇಕಿದೆ.

ಕಾಂಕ್ರೀಟ್ ಹಾಕದಿರುವ ಭಾಗದಲ್ಲೇ ಶಿರವಾಡದ ಕಡೆಗೆ ಹಾಗೂ ಕಾರವಾರದತ್ತ ವಾಹನಗಳು ಸಂಚರಿಸಬೇಕಿದೆ. ಒಂದವೇಳೆ, ವಾಹನಗಳು ಎದುರು ಬದುರಾದರೆ ಎರಡೂ ಕಡೆಯ ವಾಹನಗಳು ಬದಿಗೆ ಸರಿಯಲೂ ಜಾಗವಿಲ್ಲ. ಅಲ್ಲದೇ ಕಾಂಕ್ರೀಟ್‌ನ ಒಂದು ತುದಿಯಲ್ಲಿ ರಸ್ತೆಯ ಮಧ್ಯಭಾಗದಲ್ಲೇ ಮರಳು ಹಾಗೂ ಮಣ್ಣಿನ ರಾಶಿ ಹಾಕಲಾಗಿದೆ. ಇದರಿಂದ ವಾಹನಗಳು ಬದಿಗೆ ಸರಿಯಲೂ ಅಡಚಣೆಯಾಗುತ್ತಿದೆ.

ADVERTISEMENT

‘ಈ ಭಾಗದಲ್ಲಿ ಕಾಂಕ್ರೀಟ್ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಕಾಮಗಾರಿ ವಿಳಂವಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ರೈಲು ನಿಲ್ದಾಣದ ಕಡೆಗೆ, ಕಾರವಾರಕ್ಕೆ ಬರುವವರು ಇದರಿಂದ ಬೇಸತ್ತಿದ್ದಾರೆ. ರಾತ್ರಿ ಸಂಚರಿಸಲು ಭಾರಿ ಕಷ್ಟವಾಗುತ್ತದೆ’ ಎನ್ನುತ್ತಾರೆ ಕಾರು ಚಾಲಕ ದಿನೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.