ADVERTISEMENT

ಮಳೆ ಜೊತೆ ಬಿರುಗಾಳಿ: ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:11 IST
Last Updated 26 ಜುಲೈ 2024, 14:11 IST
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಮನೆಯೊಂದರ ಮೇಲೆ ಶುಕ್ರವಾರ ಗಾಳಿ-ಮಳೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಮನೆಯೊಂದರ ಮೇಲೆ ಶುಕ್ರವಾರ ಗಾಳಿ-ಮಳೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ   

ಹೊನ್ನಾವರ: ತಾಲ್ಲೂಕಿನಲ್ಲಿ ಮಳೆಯ ಜೊತೆಗೆ ಬಿರುಗಾಳಿಯ ಅಬ್ಬರ ಶುಕ್ರವಾರ ಮುಂದುವರಿದಿದ್ದು ಹಲವು ಅನಾಹುತಗಳು ಸಂಭವಿಸಿವೆ.

‘ಹಳದೀಪುರ ಜೋಗ್ನಿಕಟ್ಟೆಯ ಅನಿಲ ದೇವಾನಂದ ಡೊಂಗ್ರಿಗರಾಸಿಯಾ ಅವರ ಮನೆಯ ಅಡುಗೆಕೋಣೆಗೆ ಹಾಕಿದ್ದ ತಗಡಿನ ಶೀಟು ಗಾಳಿಗೆ ಹಾರಿಹೋಗಿದೆ. ಚಿಕ್ಕನಕೋಡ ಹಿತ್ತಲಕೇರಿಯ ಗಿರೀಶ ತಿಮ್ಮಪ್ಪ ನಾಯ್ಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಹೊಸಾಕುಳಿಯ ಕೃಷ್ಣಪ್ಪ ಜಟ್ಟಪ್ಪ ನಾಯ್ಕ ಅವರ ಅಡಿಕೆ ತೋಟದಲ್ಲಿ ಕಾಡು ಜಾತಿಯ ಮರ ಬಿದ್ದು 30 ಅಡಿಕೆ ಮರಗಳು ಧ್ವಂಸಗೊಂಡಿವೆ’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿರುಗಾಳಿಗೆ ಗ್ರಾಮೀಣ ಭಾಗದಲ್ಲಿ ಹಲವು ಮರಗಳು ಮುರಿದು ಬಿದ್ದಿವೆ. ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿದ್ದು ವಿದ್ಯುತ್ ವ್ಯತ್ಯಯ ತೀವ್ರವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.