ADVERTISEMENT

ಕುಮಟಾ | ಗುಡ್ಡ ಕುಸಿತ: ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 14:21 IST
Last Updated 3 ಆಗಸ್ಟ್ 2024, 14:21 IST
ಕುಮಟಾ ತಾಲ್ಲೂಕಿನ ದಿವಳ್ಳಿಯ ಕಲ್ಲಾರೆಮಕ್ಕಿಯಲ್ಲಿ ಮನೆಗಳ ಸಮೀಪದ ಗುಡ್ಡ ಕುಸಿದಿರುವುದು
ಕುಮಟಾ ತಾಲ್ಲೂಕಿನ ದಿವಳ್ಳಿಯ ಕಲ್ಲಾರೆಮಕ್ಕಿಯಲ್ಲಿ ಮನೆಗಳ ಸಮೀಪದ ಗುಡ್ಡ ಕುಸಿದಿರುವುದು   

ಕುಮಟಾ: ನಿರಂತರ ಮಳೆಯಿಂದ ತಾಲ್ಲೂಕಿನ ದೀವಳ್ಳಿ ಗ್ರಾಮದ ಅಘನಾಶಿನಿ ದಡದ ಕಲ್ಲಾರೆಮಕ್ಕಿ ಎಂಬಲ್ಲಿ ಎರಡು ಮನೆಗಳ ಬಳಿ ಇರುವ ಗುಡ್ಡ ಕುಸಿದು ಅಪಾಯದ ಮುನ್ಸೂಚನೆ ನೀಡಿದೆ.

ಮಾಹಿತಿ ನೀಡಿದ ಪ್ರಭಾರ ತಹಶೀಲ್ದಾರ್ ಸತೀಶ ಗೌಡ, ‘ಈ ಪ್ರದೇಶದಲ್ಲಿ ಎರಡು ಮನೆಗಳಿದ್ದು ಕೆಳಭಾಗದಲ್ಲಿರುವ ಗುಡ್ಡದ ಮಣ್ಣು ಸಡಿಲವಾಗಿ ಕುಸಿತ ಉಂಟಾಗಿದೆ. ಕುಸಿದ ಜಾಗ ಇನ್ನಷ್ಟು ಕುಸಿಯುವ ಅಪಾಯವಿದೆ. ಎರಡೂ ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರಿಗೆ ಎರಡೂ ಕುಟುಂಬಗಳನ್ನು ಸ್ಥಳಾಂತರಗೊಳಿಸುವಂತೆ ಸೂಚಿಸಲಾಗಿದೆ. ತಾಲ್ಲೂಕಿನ ಗೋಕರ್ಣ ಸಮೀಪದ ಬಂಗ್ಲೆಗುಡ್ಡದಲ್ಲಿ ಶಾಂತಿ ಗೌಡ ಅವರ ಮನೆ ಕುಸಿದು ಬಿದ್ದು ಸುಮಾರು ₹ 13 ಸಾವಿರ ಹಾನಿ ಸಂಭವಿಸಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.