ADVERTISEMENT

ಒಂಬತ್ತು ಮನೆಗಳ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:15 IST
Last Updated 18 ಅಕ್ಟೋಬರ್ 2024, 16:15 IST
ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಬಿದ್ದಿದೆ
ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಬಿದ್ದಿದೆ   

ಹಳಿಯಾಳ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆಯಿಂದ ಒಂಬತ್ತು ಮನೆಗಳ ಗೋಡೆಗಳು ಸಂಪೂರ್ಣ ಕುಸಿದಿವೆ.

ಗ್ರಾಮೀಣ ಭಾಗದಲ್ಲಿ 7 ಮನೆಗಳ ಗೋಡೆ ಹಾಗೂ ಪಟ್ಟಣದಲ್ಲಿ ಎರಡು ಮನೆಗಳ ಗೋಡೆಗಳು ಬಿದ್ದಿದ್ಮು, ಹಾನಿಗೀಡಾದ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತೆರಳಿ ಪರಿಶೀಲಿಸಿದರು. ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಪರಿಸರ ಎಂಜಿನಿಯರ್‌ ಅವರು ಹಾನಿ ಪರಿಶೀಲಿಸಿದರು. 

ಮುರ್ಕವಾಡ ಗ್ರಾಮದ ಇಂದಿರಾ ಕೃಷ್ಣಾ ಗೌಡಾ, ಕೆ.ಕೆ.ಹಳ್ಳಿ ಗ್ರಾಮದ ಖೈರುಂಬೀ ರಸೂಲಸಾಬ ಮುಲ್ಲಾ, ಜತಗಾ ಗ್ರಾಮದ ಸೈಬಿ ಅಬ್ದುಲಸಾಬ ದೇವಕಾರೆ, ಹಳಿಯಾಳ ಪಟ್ಟಣದ ಕಸಬಾಗಲ್ಲಿಯ ಮಹೇಕ ದುರ್ಗಾಡಿ, ಹೊಸೂರಗಲ್ಲಿಯ ದೇಮುನಿಸಾ ಮುಲ್ಲಾ ಅವರ ಮನೆಗೋಡೆಗಳು ಕುಸಿದಿವೆ. ಪಟ್ಟಣದಲ್ಲಿ 7.8 ಸೆಂ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಮುಂದಿನ ವಾರ ಕಟಾವು ಆಗಬೇಕಿದ್ದ ಮೆಕ್ಕೆಜೋಳ ಹಾಗೂ ಭತ್ತದ ಪೈರು ನೆಲಕ್ಕುರುಳಿ ಹಾನಿಗೀಡಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಯಿತು.

ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದ ಇಂದಿರಾ ಕೃಷ್ಣಾ ಗೌಡಾ ಅವರ ಮನೆ ಗೋಡೆ ಕುಸಿದಿದೆ
ಹಳಿಯಾಳ ತಾಲ್ಲೂಕಿನ ಜತಗಾ ಗ್ರಾಮದ ಸೈಬಿ ಅಬ್ದುಲಸಾಬ್‌ ದೇವಕಾರಿ ಅವರ ಮನೆ ಗೋಡೆ ಬಿದ್ದಿದೆ
ಹಳಿಯಾಳ ಪಟ್ಟಣದ ಕಸಬಾಗಲ್ಲಿಯಲ್ಲಿ ದುರ್ಗಾಡಿ ಅವರ ಮನೆ ಗೋಡೆ  ಕುಸಿದಿದ್ದು ಅಧಿಕಾರಿಗಳು ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.