ಸಿದ್ದಾಪುರ: ಕಸ್ತೂರಿ ರಂಗನ್ ವರದಿ ಜಾರಿಯಾಗುವುದರಿಂದ ಕೃಷಿ ಚಟುವಟಿಕೆಗಳನ್ನು , ರಸ್ತೆ ಕಾಮಗಾರಿಗಳನ್ನು, ವಾಣಿಜ್ಯ ಮಳಿಗೆಗಳನ್ನು ಹಾಗೂ ಯಾವುದೇ ರೀತಿಯ ಬೆಳವಣಿಗೆಗಳನ್ನು ಮಾಡುವುದಕ್ಕೆ ತೊಂದರೆಯಾಗುತ್ತದೆ. ಈ ವರದಿಯನ್ನು ಜಾರಿ ಗೊಳಿಸಬಾರದು ಎಂದು ರೈತ ಸಂಘದ ಮುಖಂಡ ವೀರಭದ್ರ ನಾಯ್ಕ ಮಳವಳ್ಳಿ ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಈ ವರದಿಗೆ ಜಿಲ್ಲೆಯಲ್ಲಿರುವ 147 ಪಂಚಾಯಿತಿಗಳ 704 ಹಳ್ಳಿಗಳು ಒಳಪಡುತ್ತವೆ. ವರಿದಿ ಜಾರಿ ಮಾಡಿದರೆ ಕೃಷಿ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಕೃಷಿ ಸಲಕರಣೆಗಳನ್ನು ಕಾಡಿನೊಳಗೆ ತೆಗೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಈ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ’ ಎಂದರು.
‘80 ದಶಕದಲ್ಲಿ ಬುಲ್ಡೋಜರ್ ತಂದು ಅರಣ್ಯ ನಾಶ ಮಾಡಿ ವಾಣಿಜ್ಯ ಬೆಳೆಯಾದ ಅಕೇಶಿಯಾ, ಗಾಳಿ ಮರ ನೆಟ್ಟು, ರೈಲು ಮಾರ್ಗ ಮಾಡಲು ಹೋಗಿ ಪರಿಸರ ನಾಶ ಮಾಡಿದವರೇ ಸರ್ಕಾರದವರು. ಈಗ ಪರಿಸರ ಉಳಿಸಬೇಕು ಎಂದು ರೈತರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ರೈತರು ತಮ್ಮ ಜೀವನ ನಿರ್ವಹಣೆಗೆ ಸಾಗುವಳಿ ಮಾಡುವುದರ ಜೊತೆಗೆ ಪರಿಸರ ಉಳಿಸುತ್ತಿದ್ದಾರೆ. ಅಂತವರಿಗೆ ಹಕ್ಕು ಪತ್ರ ನೀಡುವ ಕಾರ್ಯವಾಗಬೇಕು’ ಎಂದರು.
ರಾಘು ಕವಂಚೂರ, ವಿನಾಯಕ ಕೊಂಡ್ಲಿ, ತಿಮ್ಮಣ್ಣ ಕಡಕೇರಿ, ಶಿವಾನಂದ ಹೊನ್ನೇಗುಂಡಿ, ಕೆ.ಟಿ.ಹೊನ್ನೇಗುಂಡಿ, ರೇವಣ್ಣ ಶಿರಳಗಿ, ಗೋವಿಂದ ಗೌಡ, ಅಣ್ಣಪ್ಪ ಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.