ADVERTISEMENT

ಗೋಕರ್ಣ: ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:33 IST
Last Updated 8 ಅಕ್ಟೋಬರ್ 2024, 15:33 IST
ಗೋಕರ್ಣದ ಕುಡ್ಲೆ ಬೀಚಿನಲ್ಲಿ ನೀರಿನಲ್ಲಿ ಮುಳುಗುತ್ತಿದ್ದು, ರಕ್ಷಿಸಲ್ಪಟ್ಟ ಪ್ರವಾಸಿಗ ಮತ್ತು ರಕ್ಷಿಸಿದ ಸಿಬ್ಬಂದಿ. 
ಗೋಕರ್ಣದ ಕುಡ್ಲೆ ಬೀಚಿನಲ್ಲಿ ನೀರಿನಲ್ಲಿ ಮುಳುಗುತ್ತಿದ್ದು, ರಕ್ಷಿಸಲ್ಪಟ್ಟ ಪ್ರವಾಸಿಗ ಮತ್ತು ರಕ್ಷಿಸಿದ ಸಿಬ್ಬಂದಿ.    

ಗೋಕರ್ಣ: ಇಲ್ಲಿಯ ಕುಡ್ಲೆ ಬೀಚಿನ ಸಮುದ್ರದಲ್ಲಿ ಮಂಗಳವಾರ ಸಂಜೆ ಸಮುದ್ರದ ಅಲೆಯ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ಮತ್ತು ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಉತ್ತರಪ್ರದೇಶದ ಬನಾರಸ್ ಮೂಲದ ರಾಹುಲ್ ಕುಮಾರ್ (28) ಎಂಬವವರನ್ನು ರಕ್ಷಿಸಲಾಗಿದೆ.

ಗೋಕರ್ಣಕ್ಕೆ ಮುರಾರಿ ಬಾಪುರವರ ರಾಮನಕಥಾ ಕೇಳಲು ಬಂದಿದ್ದ ಇವರು, ಸಮುದ್ರದಲ್ಲಿ ಈಜಾಡಲು ಇಳಿದಿದ್ದಾಗ ಈ ಘಟನೆ ನಡೆದಿದೆ.

ADVERTISEMENT

ಸಮುದ್ರದ ಅಲೆಯ ಸುಳಿಗೆ ಸಿಲುಕಿ ದಡಕ್ಕೆ ಬರಲಾಗದೇ ಮುಳುಗುವ ಹಂತದಲ್ಲಿದ್ದಾಗ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ, ಪ್ರದೀಪ ಅಂಬಿಗ ಮತ್ತು ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ರಕ್ಷಣೆಗೆ ಧಾವಿಸಿ, ಜೆಟ್ ಸ್ಕೀ ಮೂಲಕ ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.