ಕಾರವಾರ:ಮೀನುಗಾರಿಕೆ–ಕಡಲವಿಜ್ಞಾನಸಂಶೋಧನಾಹಡಗು(ಎಫ್‌ಒಆರ್‌ವಿ) ‘ಸಾಗರ ಸಂಪದ’ ಶನಿವಾರ ನಗರದ ಬಂದರಿನಲ್ಲಿ ಲಂಗರುಹಾಕಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ನೀಡುವ ಸಾಧ್ಯತೆ ಇದೆ.
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿಕೊಚ್ಚಿಯ ಭೂವಿಜ್ಞಾನ ಸಚಿವಾಲಯದ ಕಡಲಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ (ಸಿ.ಎಂ.ಎಲ್.ಆರ್.ಇ) ಬಂದರಿನಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಿದೆ. ಅ. 2ರಂದು ಗಾಂಧಿ ಜಯಂತಿಯ ಒಳಗಾಗಿ ದೇಶದ ಎಲ್ಲೆಡೆ ‘ಸ್ವಚ್ಛ ಭಾರತ’ ಜಾಗೃತಿ ಮೂಡಿಸುವಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.ಅದರ ಭಾಗವಾಗಿ ಹಡಗು ಬಂದರಿಗೆ ಬರುತ್ತಿದೆ.
ಕೊಚ್ಚಿಯ ಸಿ.ಎಂ.ಎಲ್.ಆರ್.ಇ ವಿಜ್ಞಾನಿ ಡಾ.ಎಂ.ಸುಬ್ರಮಣಿಯನ್ ಈ ವೇಳೆ ಹಾಜರಿದ್ದು,ವೀಕ್ಷಕರಿಗೆ ಮಾಹಿತಿಯನ್ನು ನೀಡಲಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆಹಡಗಿನ ವೀಕ್ಷಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಹಡಗಿನವಿಶೇಷವೇನು?:‘ಸಾಗರ ಸಂಪದ’, ಭಾರತೀಯ ಸಂಶೋಧನಾ ಹಡಗು. ಇದನ್ನು ಸಾಗರ ವಿಜ್ಞಾನ,ಕಡಲಜೀವ ವಿಜ್ಞಾನಹಾಗೂಮೀನುಗಾರಿಕೆ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಲು ಬಳಸಲಾಗುತ್ತದೆ. ಕೊಚ್ಚಿಯ ಕಡಲಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರಈ ಹಡಗಿನ ಸಂಪೂರ್ಣ ಜವಾಬ್ದಾರಿಯನ್ನುನಿರ್ವಹಿಸುತ್ತಿದೆ.
ಡೆನ್ಮಾರ್ಕ್‌ನ ಡೆನ್ನಿಬ್ರಾಗ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾದ ಈ ಹಡಗನ್ನು, 1984ರಲ್ಲಿ ಮುಂಬೈನಲ್ಲಿ ಸಂಶೋಧನಾ ಕಾರ್ಯಕ್ಕೆ ವಿನಿಯೋಗಿಸಲಾಯಿತು. ಈವರೆಗೆ370ಕ್ಕೂ ಅಧಿಕವೈಜ್ಞಾನಿಕ ಯಾತ್ರೆಗಳನ್ನು ಇದುಪೂರ್ಣಗೊಳಿಸಿದೆ.72 ಮೀಟರ್ ಉದ್ದದ ಈ ಹಡಗಿನಲ್ಲಿ59ಮಂದಿಯ ತಂಡ ಇರುತ್ತದೆ. ಇವರಲ್ಲಿ ಭಾರತೀಯ ಶಿಪ್ಪಿಂಗ್ ಕಾರ್ಪೋರೇಷನ್‌ನ 34 ಮಂದಿ, 25 ಮಂದಿ ವೈಜ್ಞಾನಿಕ ಹಾಗೂ ತಾಂತ್ರಿಕ ತಜ್ಞರು ಇರುತ್ತಾರೆ.
ಸುಸಜ್ಜಿತ ವೈದ್ಯಕೀಯ ಕೋಣೆ, ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಇಳಿಯಲು ವ್ಯವಸ್ಥೆ,ಉಪಗ್ರಹನ್ಯಾವಿಗೇಷನ್ ಸೇರಿ ಹಲವು ವ್ಯವಸ್ಥೆಗಳನ್ನು ಇದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.