ADVERTISEMENT

ಸಮುದ್ರದ ಅಲೆಯಬ್ಬರ, ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:54 IST
Last Updated 22 ಆಗಸ್ಟ್ 2024, 16:54 IST
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಿಡ್ಲ್ ಬೀಚಿನ ಕರಿಯಪ್ಪನ ಕಟ್ಟೆ ಬಳಿ ಸಮುದ್ರದ ಅಲೆಗಳಿಗೆ ಅಬ್ಬರಕ್ಕೆ ಅಂಗಡಿ, ರೆಸಾರ್ಟ್‌ಗೆ ಹಾನಿಯಾಗಿರುವುದು
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಿಡ್ಲ್ ಬೀಚಿನ ಕರಿಯಪ್ಪನ ಕಟ್ಟೆ ಬಳಿ ಸಮುದ್ರದ ಅಲೆಗಳಿಗೆ ಅಬ್ಬರಕ್ಕೆ ಅಂಗಡಿ, ರೆಸಾರ್ಟ್‌ಗೆ ಹಾನಿಯಾಗಿರುವುದು   

ಅಂಕೋಲಾ/ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹಾರವಾಡ ತರಂಗಮೇಟದಲ್ಲಿ ಸಮುದ್ರದಲೆಗಳ ಅಬ್ಬರಕ್ಕೆ ಕಡಲತೀರದಲ್ಲಿದ್ದ ಮನೆ ಕೊಚ್ಚಿ ಹೋಗಿದೆ. ಅಕ್ಕಪಕ್ಕದ ಮನೆಗಳು ಅಪಾಯದ ಅಂಚಿನಲ್ಲಿವೆ.

ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ಬುಧವಾರ ತಡರಾತ್ರಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸಿದೆ. ಅಶೋಕ ಹರಿಕಂತ್ರ ಎಂಬುವರಿಗೆ ಸೇರಿದ ಮನೆ, ತೆಂಗಿನ ಮರಗಳು ಕೊಚ್ಚಿಹೋಗಿವೆ.

ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ಬಳಿ ಗುರುವಾರ ಸಂಜೆ ದಿಢೀರ್ ಉಕ್ಕೇರಿ ಬಂದ ಸಮುದ್ರದ ಅಲೆಗಳಿಗೆ ನಾಲ್ಕು ಅಂಗಡಿ, ರೆಸಾರ್ಟ್‍ಗಳಿಗೆ ತೀವ್ರ ಹಾನಿಯಾಗಿದೆ.

ADVERTISEMENT

ಅರಬ್ಬಿ ಸಮುದ್ರದ ಅಬ್ಬರಕ್ಕೆ ಎರಡು ಅಂಗಡಿ ಸಂಪೂರ್ಣ ಕೊಚ್ಚಿ ಹೋಗಿದ್ದು, 10ಕ್ಕೂ ಹೆಚ್ಚು ಕೊಠಡಿಗಳು ಭಾಗಶಃ ನಾಶವಾಗಿದೆ. ಕೆಲ ಅಂಗಡಿಗಳ ತಡೆಗೋಡೆ ಕುಸಿದುಬಿದ್ದಿದೆ.

‘ಪ್ರವಾಸಿಗರ ಅನುಕೂಲಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಿ ತೆರೆದಿದ್ದ ಕೆಫೆ ನೀರಿನಲ್ಲಿ ಕೊಚ್ಚಿಹೋಗಿದೆ. ಹೀಗೆಯೇ ಮುಂದುವರಿದರೆ ಇನ್ನೂ ಹೆಚ್ಚಿನ ಹಾನಿ ಸಂಭವಿಸಬಹುದು. ದುರ್ಘಟನೆಯಿಂದ ಭಯಭೀತರಾಗಿದ್ದೇವೆ’ ಎಂದು ಕೆಫೆ ಓಶನ್ ವ್ಯೂ ಮಾಲಿಕ ಗಣಪು ಜಟ್ಟಯ್ಯ ಗೌಡ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಿಡ್ಲ್ ಬೀಚಿನ ಕರಿಯಪ್ಪನ ಕಟ್ಟೆ ಬಳಿ ಸಮುದ್ರದ ಅಲೆಗಳಿಗೆ ಅಬ್ಬರಕ್ಕೆ ಅಂಗಡಿ ರೆಸಾರ್ಟ್‌ಗೆ ಹಾನಿಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.