ADVERTISEMENT

ಶಿರೂರು | ಗುಡ್ಡ ಕುಸಿದ ಸ್ಥಳವೀಗ ಸೆಲ್ಫಿ ತಾಣ: ದುರಂತದ ಜಾಗ ವೀಕ್ಷಿಸುವ ಕೇರಳಿಗರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 20:02 IST
Last Updated 17 ಸೆಪ್ಟೆಂಬರ್ 2024, 20:02 IST
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾದ ಮಣ್ಣಿನ ದಿಬ್ಬಗಳನ್ನು ಪ್ರವಾಸಿಗರು ವೀಕ್ಷಿಸುತ್ತಿರುವುದು
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾದ ಮಣ್ಣಿನ ದಿಬ್ಬಗಳನ್ನು ಪ್ರವಾಸಿಗರು ವೀಕ್ಷಿಸುತ್ತಿರುವುದು   

ಅಂಕೋಲಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದುರಂತ ಸಂಭವಿಸಿ ಎರಡು ತಿಂಗಳಾಗಿದ್ದು, ಗುಡ್ಡ ಕುಸಿತದ ಸ್ಥಳ ಈಗ ಪ್ರವಾಸಿಗರ ಸೆಲ್ಫಿ ತಾಣವಾಗಿ ಮಾರ್ಪಟ್ಟಿದೆ. ಅದರಲ್ಲೂ ಕೇರಳದ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಾಗುವ ಹಲವು ವಾಹನಗಳು ಪ್ರತಿ ದಿನ ಗುಡ್ಡ ಕುಸಿತದ ಸ್ಥಳದಲ್ಲಿ ನಿಲುಗಡೆ ಆಗುತ್ತವೆ. ಕೇರಳದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಸಾಗುವ ಪ್ರವಾಸಿಗರು ದುರಂತದ ಸ್ಥಳದಲ್ಲಿ ಕೆಲ ನಿಮಿಷ ಕಳೆದು, ಗುಡ್ಡ ಕುಸಿತವಾದ ಪ್ರದೇಶ, ಗಂಗಾವಳಿ ನದಿಯನ್ನು ವೀಕ್ಷಿಸುತ್ತಾರೆ. ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ.

ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ನದಿ ತೀರದ ಕಲ್ಲುಗಳ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಾರೆ. ಸ್ವಲ್ಪ ಎಡವಿದರೂ ಕೆಳಗೆ ಬೀಳುವ ಅಪಾಯದ ಸಾಧ್ಯತೆ ಇದೆ.

ADVERTISEMENT
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ಸಮೀಪದ ಗಂಗಾವಳಿ ನದಿ ತೀರದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ಕೇರಳ ಪ್ರವಾಸಿಗರು

‘ಗಣೇಶ ಚತುರ್ಥಿ ಬಂದೋಬಸ್ತ್ ಕಾರಣ ಇಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲ. ಹೀಗಾಗಿ ಪ್ರವಾಸಿಗರ ಮೇಲೆ ಹಿಡಿತ ಇಲ್ಲದಂತೆ ಆಗಿದೆ. ನದಿಯಲ್ಲಿ ಬಿದ್ದ ಮಣ್ಣಿನ ದಿಬ್ಬ ಆದಷ್ಟು ಬೇಗ ತೆರವುಗೊಳಿಸಿದರೆ, ಪ್ರವಾಸಿಗರ ವೀಕ್ಷಣೆ ತಡೆಯಬಹುದು’ ಎಂದು ಸ್ಥಳೀಯರಾದ ರಾಜೇಶ ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.