ಸಿದ್ದಾಪುರ: ‘ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗಲು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಹಕರಿಯಾಗುತ್ತವೆ’ ಎಂದು ವಿ.ಎನ್. ನಾಯ್ಕ ಬೇಡ್ಕಣಿ ಹೇಳಿದರು.
ತಾಲ್ಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಆಯೋಜಿಸಿದ್ದ ವೇಣು-ಗಾನ-ಲಯ- ವಿನೋದ ಎಂಬ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ ಹಾಗೂ ಖ್ಯಾತ ಕೊಳಲು ವಾದಕ ಪ್ರಕಾಶ್ ಹೆಗಡೆ ಕಲ್ಲಾರೆ ಮನೆಯವರನ್ನು ಸನ್ಮಾನಿಸಲಾಯಿತು.
ಎಂ.ಕೆ.ನಾಯ್ಕ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕಾಂಚನಾ ಹರೀಶ ನಾಯ್ಕ ಅವರನ್ನು ಅಭಿನಂದಿಸಲಾಯಿತು.
ಮಹಾಲಕ್ಷ್ಮಿ ನಾಯ್ಕ ಮತ್ತು ರಾಜೇಶ್ವರಿ ಭಟ್ಟ ಸನ್ಮಾನಪತ್ರ ವಾಚಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣಪತಿ ಕನ್ನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೇಶವ ಹೆಗಡೆಯವರ ಯಕ್ಷಗಾನ ಹಾಡುಗಳಿಗೆ ಪ್ರಕಾಶ ಹೆಗಡೆಯವರ ಕೊಳಲು, ಖ್ಯಾತ ಮದ್ದಳೆವಾದಕ ಶಂಕರ ಭಾಗವತ ಶಿರಸಿ ಅವರ ಮದ್ದಳೆ, ಗುರುರಾಜ ಆಡುಕಳಾ ಅವರ ತಬಲಾ, ಪ್ರಸನ್ನ ಹೆಗ್ಗಾರ ಅವರ ಚಂಡೆವಾದನಗಳು ಪ್ರೇಕ್ಷಕರನ್ನು ರಂಜಿಸಿದವು.
ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ, ವಿನಾಯಕ ಭಟ್ಟ ಡೊಂಬೆಕೈ ಇದ್ದರು. ಗಂಗಾಧರ ನಾಯ್ಕ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.