ADVERTISEMENT

25ನೇ ವರ್ಷಕ್ಕೆ ಕಾಲಿಟ್ಟ ಒಡ್ಡೋಲಗ ಹಿತ್ತಲಕೈ

ಮರುಕಳಿಸಿದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 14:37 IST
Last Updated 6 ಸೆಪ್ಟೆಂಬರ್ 2024, 14:37 IST
ಸಿದ್ದಾಪುರ ತಾಲ್ಲೂಕಿನ ಕವಲಕೊಪ್ಪದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವನ್ನು ವಿಜಯ ಹೆಗಡೆ ದೊಡ್ಮನೆ ಉದ್ಘಾಟಿಸಿದರು
ಸಿದ್ದಾಪುರ ತಾಲ್ಲೂಕಿನ ಕವಲಕೊಪ್ಪದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವನ್ನು ವಿಜಯ ಹೆಗಡೆ ದೊಡ್ಮನೆ ಉದ್ಘಾಟಿಸಿದರು   

ಸಿದ್ದಾಪುರ: ಒಡ್ಡೋಲಗ ತಂಡವು ಗಣಪತಿ ಹಿತಲಕೈ ಅವರ ನೇತೃತ್ವದಲ್ಲಿ ಸಾಂಸ್ಕೃತಿಕವಾಗಿ ಅತ್ಯಮೂಲ್ಯ ಕೊಡುಗೆಗಳನ್ನು ಸಮಾಜಕ್ಕೆ ನೀಡಿದೆ. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪಟ್ಟಣದ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.

ತಾಲ್ಲೂಕಿನ ಕವಲಕೊಪ್ಪದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಒಡ್ಡೋಲಗ ತಂಡದಿಂದ 3 ದಿನಗಳ ಕಾಲ ನಡೆದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎ.ಎಸ್.ಹೆಗಡೆ ಕವಲಕೊಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಡಿ.ಜಿ.ಹೆಗಡೆ ಕೆರೆಹೊಂಡ, ರವಿ ಹೆಗಡೆ ಹೂವಿನಮನೆ, ಸತೀಶ್ ಹೆಗಡೆ ದಂಟಕಲ್ ಇದ್ದರು. ಮೊದಲ ದಿನ ರಾಮಾಂಜನೇಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಎರಡನೆಯ ದಿನ ಶಾಸ್ತ್ರೀಯ ಸಂಗೀತ ಜುಗಲ್ಬಂದಿ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಹಿರೇಹದ್ದ, ನಾಗರಾಜ ಹೆಗಡೆ ಶಿರ್ನಾಲೆ, ಗಣೇಶ್ ಭಾಗ್ವತ ಗುಂಟ್ಕಲ್, ಮೇಧಾ ಭಟ್ ಅಗ್ಗೆರೆ, ವಾಣಿ ಹೆಗಡೆ ಗೊಂಟನಾಳ, ಅಜಯ್ ಹೆಗಡೆ ವರ್ಗಾಸರ, ಅನೀಶ್ ಹೆಗಡೆ ಹಿರೇಹದ್ದ ಪಾಲ್ಗೊಂಡಿದ್ದರು. ಶಶಿಭೂಷಣ ಹೆಗಡೆ ದೊಡ್ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ಮೂರನೆಯ ದಿನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎನ್.ವಿ. ಹೆಗಡೆ ಮುತ್ತಿಗೆ ವಹಿಸಿದ್ದರು. ವಿನಾಯಕ ಹೆಗಡೆ ಕವಲಕೊಪ್ಪ, ನಾಗರಾಜ್ ಮತ್ತಿಗಾರ್, ಅನಂತ ಹೆಗಡೆ ಗೊಂಟನಾಳ, ರಮೇಶ ಹೆಗಡೆ ಹಾರ್ಸಿಮನೆ, ಎಂ.ಕೆ. ನಾಯ್ಕ ಹೊಸಳ್ಳಿ ಮಾತನಾಡಿದರು.

ದತ್ತಮೂರ್ತಿ ಭಟ್ ಶಿವಮೊಗ್ಗ ಸಾಂಸ್ಕೃತಿಕ ಸಂಸ್ಥೆ- ಸಂಘಟನೆ -ಸಾಧನೆ ಎಂಬ ವಿಷಯದ ಕುರಿತು ಮಾತನಾಡಿದರು. ಸ್ವಾಗತಿಸಿ ಪರಿಚಯಿಸಿದ ಗಣಪತಿ ಹೆಗಡೆ ಹಿತ್ತಲಕೈ ಕಳೆದ 25 ವರ್ಷಗಳಲ್ಲಿ ತಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಬೆಂಬಲಿಸಿದ ಕಲಾವಿದರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಮತ್ತು ಬೆಂಗಳೂರು ಇವರ ಸಹಕಾರವನ್ನು ಸ್ಮರಿಸಿದರು . ಭಾಸ್ಕರ ಹೆಗಡೆ ಮುತ್ತಿಗೆ ನಿರೂಪಿಸಿದರು. ನಂತರ ಶಾಸ್ತ್ರೀಯ ಯಕ್ಷಮೇಳ ಉಡುಪಿ ಇವರು ಋತುಪರ್ಣ ಎಂಬ ಯಕ್ಷಗಾನ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.