ಹಳಿಯಾಳ: ಬುಡಕಟ್ಟು ಸಿದ್ದಿ ಸಮುದಾಯದ ಪ್ರಮುಖರಾದ ಡಿಯೋಗ ಸಿದ್ದಿ (75) ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು, ಸಹೋದರ, ಸಹೋದರಿ ಇದ್ದಾರೆ.
ತಂದೆ ಬಸ್ತ್ಯಾಂವರಿಂದ ಸಿದ್ದಿ ಸಮುದಾಯದ ಏಳಿಗೆಯ ದೀಕ್ಷೆ ಪಡೆದ ಡಿಯೋಗ ಸಿದ್ದಿ, ಐದು ದಶಕಗಳಿಂದ ವಿವಿಧ ಹೋರಾಟ, ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಕೆ.ಡಿ.ಡಿ.ಸಿ ಸಂಸ್ಥೆಯಲ್ಲಿ ಸಮಾಜ ಸೇವಾ ಕಾರ್ಯಕರ್ತರ ತರಬೇತಿ ಪಡೆದಿದ್ದರು. ‘ಗ್ರೀನ್ ಇಂಡಿಯಾ’ ಸಂಸ್ಥೆಯ ಕಾರ್ಯಕರ್ತರೂ ಆಗಿದ್ದರು.
‘ವನಶ್ರೀ ಗಿರಿಜನರ ವಿವಿಧೋದ್ದೇಶಗಳ ಸಹಕಾರ ಸಂಘ’ವನ್ನು ಸ್ಥಾಪಿಸಿ ಅಧ್ಯಕ್ಷರಾಗಿದ್ದರು. ರಾಜ್ಯ ಮಟ್ಟದಲ್ಲಿ ಬುಡಕಟ್ಟು ಸಂಘಟನೆಯ ಉಪಾಧ್ಯಕ್ಷರಾಗಿದ್ದರು. ಜಿಲ್ಲಾ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯರಾಗಿದ್ದರು. ಬುಡಕಟ್ಟು ಸಮುದಾಯದ ಏಳಿಗೆಗಾಗಿ ಅವರ ಕಾರ್ಯವನ್ನು ರಾಜ್ಯ ಸರ್ಕಾರ ಗುರುತಿಸಿ, ‘ವಾಲ್ಮಿಕಿ ಪ್ರಶಸ್ತಿ’ ಪ್ರದಾನ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.